ಶಿರ್ವ: ನ್ಯಾಯಾಲಯಕ್ಕೆ ಹಾಜರಾಗದೆ 2 ವರ್ಷಗಳಿಂದ ತಲೆಮರೆಸಿ ಓಡಾಡುತ್ತಿದ್ದವನ ಬಂಧನ..!!

ಶಿರ್ವ: ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಗೋ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ 2 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡು ಓಡಾಡುತ್ತಿದ್ದ ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

ಪಡುಬಿದ್ರಿ ನಾಡ್ಸಾಲು ಗ್ರಾಮದ ಕಂಚಿನಡ್ಕ ಶಾಲೆಯ ಬಳಿಯ ನಿವಾಸಿ ಜಬ್ಟಾರ್‌ ಹುಸೇನ್‌ ವಾರೆಂಟ್‌ ಅಸಾಮಿಯನ್ನು ಶಿರ್ವ ಪೊಲೀಸ್‌ ಉಪನಿರೀಕ್ಷಕ ಅನಿಲ್‌ ಕುಮಾರ್‌ ಟಿ. ನಾಯ್ಕ (ತನಿಖೆ) ಅವರ ಮಾರ್ಗದರ್ಶನದಂತೆ ಎಎಸ್‌ಐ ಕೃಷ್ಣ ಆಚಾರ್ಯ ಮತ್ತು ಪಿಸಿ ರಾಮ ರಾಜಪ್ಪ ನಾಯ್ಕ ಎ.1 ರಂದು ಪಡುಬಿದ್ರಿ ಬಸ್‌ನಿಲ್ದಾಣದ ಬಳಿ ಬಂಧಿಸಿ, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ಎಸ್‌ಸಿ ನಂಬ್ರ ಆಗುವವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಆರೋಪಿಯನ್ನು ಹಿರಿಯಡ್ಕ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಗಿದೆ.


ಈತನ ಮೇಲೆ ಕಾಪು, ಭಟ್ಕಳ ನಗರ ಪೊಲೀಸ್‌ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿಯಿರುತ್ತದೆ. ಅಲ್ಲದೆ ಈ ಹಿಂದೆ ದ.ಕ. ಜಿಲ್ಲೆಯ ಬಜ್ಪೆ,ಸುರತ್ಕಲ್‌ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿರುತ್ತವೆ ಎಂದು ತಿಳಿದು ಬಂದಿದೆ.

Scroll to Top