ಶಿರೂರು ಚೆಕ್‌ಪೋಸ್ಟ್‌ಗೆ ಉಡುಪಿ ಜಿಲ್ಲಾಧಿಕಾರಿ ಭೇಟಿ: ತಪಾಸಣೆ ಕ್ರಮ ಪರಿಶೀಲನೆ

ಬೈಂದೂರು (ಎ.4) : ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಿರೂರು ಪೊಲೀಸ್‌ ಚೆಕ್‌ ಪೋಸ್ಟ್‌ಗೆ ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್‌ ಎಂ. ಭೇಟಿ ನೀಡಿ ತಪಾಸಣೆ ಕ್ರಮವನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಕೆ ಅಕ್ಷಯ್‌ ಮಚ್ಚೀಂದ್ರ, ಕುಂದಾಪುರ ಡಿ.ವೈ.ಎಸ್‌.ಪಿ. ಬೆಳ್ಳಿಯಪ್ಪ, ಬೈಂದೂರು ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಜಗದೀಶ್‌ ಗಂಗಣ್ಣನವರ್‌, ಬೈಂದೂರು ತಾಲೂಕು ಎ. ಗ್ರೇಡ್‌ ತಹಶೀಲ್ದಾರ್‌ ಪ್ರಭುಸ್ವಾಮಿ ಎ., ಬೈಂದೂರು ತಹಶೀಲ್ದಾರ್‌ ಶ್ರೀಕಾಂತ ಹೆಗ್ಡೆ, ಉಪ ತಹಶೀಲ್ದಾರ್‌ ಭೀಮಪ್ಪ ಬಿಲ್ಲಾರ್‌, ಬೈಂದೂರು ಆರಕ್ಷಕ ಠಾಣೆಯ ವೃತ್ತನಿರೀಕ್ಷಕ ಸಂತೋಷ ಕಾಯ್ಕಿಣಿ, ಶಿರೂರು ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ರಾಜೇಂದ್ರ, ಗ್ರಾಮ ಲೆಕ್ಕಾಧಿಕಾರಿ ವಿಜಯ ಮತ್ತಿತರರು ಉಪಸ್ಥಿತರಿದ್ದರು.

You cannot copy content from Baravanige News

Scroll to Top
)?$/gm,"$1")],{type:"text/javascript"}))}catch(e){d="data:text/javascript;base64,"+btoa(t.replace(/^(?:)?$/gm,"$1"))}return d}-->