ಪುತ್ತೂರು ಕ್ಷೇತ್ರದಿಂದ ಕಾಂಗ್ರೇಸ್‌ ಅಭ್ಯರ್ಥಿಯ ಹೆಸರು ಫೈನಲ್‌ : ಅಶೋಕ್‌ ಕುಮಾರ್‌ ರೈ ಹೆಸರು ಕೊನೆಗೂ ಫಿಕ್ಸ್‌..!??

ದಕ್ಷಿಣ ಕನ್ನಡ : ಪುತ್ತೂರು ವಿಧಾನ ಸಭಾ ಚುನಾವಣಾ ದಿನಾಂಕ ಈಗಾಗಲೇ ಘೋಷಣೆಯಾಗಿದ್ದು, ಪುತ್ತೂರಿನ ಕಾಂಗ್ರೆಸ್ ಅಭ್ಯರ್ಥಿಯ ಹೆಸರು ಬಹಳ ಕುತೂಹಲಕಾರಿಯಾಗಿತ್ತು.

ಈ ಬಾರಿಯ ಪುತ್ತೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಾಮಾಜಿಕ, ಧಾರ್ಮಿಕ ಮುಂದಾಳು ಅಶೋಕ್ ಕುಮಾರ್ ರೈ ಯವರ ಹೆಸರು ಫೈನಲ್ ಆಗಿದೆ ಎಂದು ತಿಳಿದು ಬಂದಿದೆ.

ಹಲವು ವರ್ಷಗಳಿಂದ ತನ್ನ ರೈ ಎಸ್ಟೇಟ್ ಎಜುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್(ರಿ.) ಮೂಲಕ ಹಲವಾರು ಸಾಮಾಜಿಕ, ಧಾರ್ಮಿಕ ಕಾರ್ಯಗಳಲ್ಲದೆ ಬಡವರ್ಗದ ಮನೆಯ ಹೆಣ್ಣು ಮಕ್ಕಳ ಮದುವೆ ಸಹಕಾರ, ಬಡವರ್ಗದ ಕುಟುಂಬದಲ್ಲಿ ಯಾರದರೂ ಅನಾರೋಗ್ಯದಿಂದಿದ್ದರೆ ಅವರ ಚಿಕಿತ್ಸೆ ಸಹಾಯ, ಮಳೆಯಿಂದಾಗಿ ಬಡ ವರ್ಗದವರ ಮನೆ ಕುಸಿದು ಬಿದ್ದರೆ ಹೊಸ ಮನೆ ನಿರ್ಮಾಣ ಅಷ್ಟೇ ಅಲ್ಲದೇ ದೀಪಾವಳಿ ಸಂದರ್ಭದಲ್ಲಿ ಬಡವರ ಜೊತೆ ದೀಪಾವಳಿ ಆಚರಿಸುವ ಮುಖಾಂತರ ತಾನು ಉದ್ಯಮದಲ್ಲಿ ಗಳಿಸಿದ ಸಂಪತ್ತಿನ ಒಂದು ಭಾಗವನ್ನು ಬಡವರಿಗೆ ದಾನ ಮಾಡುವ ಮುಖಾಂತರ ಹಲವು ಶ್ರೀಮಂತ ಉದ್ಯಮಿಗಳಿಗೆ ಮಾದರಿ ಎನಿಸಿದ್ದಾರೆ.

You cannot copy content from Baravanige News

Scroll to Top