ನಾಲ್ಕು ಫೋನ್‌ಗಳಲ್ಲಿ ಬಳಸಬಹುದು ಒಂದೇ ವಾಟ್ಸ್‌ಆ್ಯಪ್‌ ಖಾತೆ..!!

ವಾಟ್ಸ್‌ಆ್ಯಪ್‌ ಇದೀಗ ಹೊಸ ಫೀಚರ್‌ವೊಂದನ್ನು ಹೊರತಂದಿದ್ದು, ಒಂದೇ ವಾಟ್ಸ್‌ಆ್ಯಪ್‌ ಖಾತೆಯನ್ನು ಒಂದೇ ಸಮಯದಲ್ಲಿ ನಾಲ್ಕು ಫೋನ್‌ಗಳಲ್ಲಿ ಬಳಸಬಹುದಾಗಿದೆ. ಈ ಬಗ್ಗೆ ಫೇಸ್‌ಬುಕ್‌ ಸಿಇಓ ಮಾರ್ಕ್‌ ಝುಕರ್‌ ಬರ್ಗ್‌ ಮಾಹಿತಿ ನೀಡಿದ್ದು, ’ಇಂದಿನಿಂದ ನೀವು ನಾಲ್ಕು ಫೋನ್‌ಗಳಲ್ಲಿ ಒಂದೇ ವಾಟ್ಸ್‌ಆ್ಯಪ್‌ ಖಾತೆಗೆ ಲಾಗಿನ್‌ ಆಗಬಹುದು‘ ಎಂದು ಹೇಳಿದ್ದಾರೆ.

ಈ ಹಿಂದೆ ಪ್ರೈಮರಿ ಫೋನ್‌ ಜೊತೆಗೆ ಕಂಪ್ಯೂಟರ್ ಅಥವಾ ಆಂಡ್ರಾಯ್ಡ್‌ಗಳಲ್ಲಿ ಒಂದೇ ವಾಟ್ಸ್‌ಆ್ಯಪ್‌ ಖಾತೆಯನ್ನು ಲಾಗಿನ್‌ ಮಾಡಬಹುದಿತ್ತು. ಇದು ಇಷ್ಟಕ್ಕೆ ಸೀಮಿತವಾಗಿತ್ತು. ಪ್ರೈಮರಿ ಫೋನ್‌ನ ವಾಟ್ಸ್‌ಆ್ಯಪ್‌ ಖಾತೆಯನ್ನು ಇನ್ನೊಂದು ಫೋನ್‌ನಲ್ಲಿ ಬಳಸಲು ಆಗುತ್ತಿರಲಿಲ್ಲ. ಇದರಿಂದ ಒಂದಕ್ಕಿಂತ ಹೆಚ್ಚು ಫೋನ್‌ ಬಳಸುವವರಿಗೆ ತೊಂದರೆಯಾಗುತ್ತಿತ್ತು. ಇದೀಗ ಹೊಸ ವೈಶಿಷ್ಟ್ಯದ ಮೂಲಕ ವಾಟ್ಸ್‌ಆ್ಯಪ್‌ ಮತ್ತೆ ಯುಸರ್ ಫ್ರೆಂಡ್ಲಿ ಡಿವೈಸ್ ಆಗಿದೆ.

ವಾಟ್ಸ್‌ಆ್ಯಪ್‌ ತನ್ನ ಈ ಹೊಸ ವೈಶಿಷ್ಟ್ಯವನ್ನು ‘ಒಂದು ವಾಟ್ಸ್‌ಆ್ಯಪ್‌ ಖಾತೆ ಈಗ ಮಲ್ಟಿಪಲ್‌ ಪೋನ್‌ಗಳಲ್ಲಿ‘ ಎಂದು ವಿವರಿಸಿದೆ. ಮುಂದಿನ ವಾರಗಳಲ್ಲಿ ವಾಟ್ಸ್‌ಆ್ಯಪ್‌ನ ಈ ವೈಶಿಷ್ಟ್ಯ ಲಭ್ಯವಿರುತ್ತದೆ ಎಂದು ತಿಳಿಸಿದೆ.

ಲಾಗಿನ್ ಆಗೋದು ಹೇಗೆ?

ಈ ಹೊಸ ವೈಶಿಷ್ಟ್ಯದಲ್ಲಿ ಹಳೆ ವಿಧಾನದಂತೆ ಫೋನ್‌ ಸಂಖ್ಯೆಯನ್ನು ನಮೂದಿಸಿ ಲಾಗಿನ್‌ ಆಗುವ ಅಗತ್ಯವಿಲ್ಲ. ಅದರ ಬದಲು link to existing account ಎನ್ನುವುದರ ಮೇಲೆ ಟ್ಯಾಪ್‌ ಮಾಡಬೇಕು. ಆಗ ಕ್ಯೂ ಆರ್ ಕೋಡ್ ಕಾಣಿಸುತ್ತದೆ. ನಂತರ ಪ್ರೈಮರಿ ಫೋನ್‌ ಮೂಲಕ ಕ್ಯೂಆರ್‌ ಕೋಡ್‌ ಸ್ಕ್ಯಾನ್ ಮಾಡಬೇಕು. ಹೀಗೆ ಎಲ್ಲ ಫೋನ್‌ ಗಳಲ್ಲಿಯೂ ಪ್ರೈಮರಿ ಫೋನ್‌ನ ವಾಟ್ಸ್‌ಆ್ಯಪ್‌ ಖಾತೆಯನ್ನು ಹೊಂದಬಹುದಾಗಿದೆ.

ವೈಶಿಷ್ಟ್ಯತೆಗಳೇನು?

ಒಂದು ವರ್ಷದವರೆಗೆ ಒಂದೇ ‍‍ವಾಟ್ಸ್‌ಆ್ಯಪ್‌ ಖಾತೆಯನ್ನು ಹೊಂದಿರುವ ಎಲ್ಲ ಫೋನ್‌ಗಳಲ್ಲಿ (ಗರಿಷ್ಠ ನಾಲ್ಕು) ಸಂದೇಶಗಳನ್ನು ಸಿಂಕ್ ಮಾಡುತ್ತದೆ.
ಒಂದು ವಾಟ್ಸ್‌ಆ್ಯಪ್‌ ಖಾತೆಯನ್ನು ವಿವಿಧ ಫೋನ್‌ಗಳಲ್ಲಿ (ಗರಿಷ್ಠ ನಾಲ್ಕು) ಬಳಸುವುದರಿಂದ ಒಂದು ಪೋನ್‌ ಸ್ವಿಚ್‌ ಆಫ್‌ ಆಗಿದ್ದರೂ, ಖಾತೆ ಸಿಂಕ್‌ ಆಗಿರುವುದರಿಂದ ಇತರ ಫೋನ್‌ಗಳಲ್ಲಿ ಸಂದೇಶಗಳನ್ನು ಸ್ವೀಕರಿಸಬಹುದಾಗಿದೆ.
ಇದರ ಇನ್ನೊಂದು ವೈಶಿಷ್ಟ್ಯವೆಂದರೆ ಎಲ್ಲಾ ಚಾಟ್‌ಗಳು, ಕರೆಗಳು ಎಂಡ್‌–ಟು–ಎಂಡ್‌ ಎನ್‌ಕ್ರಿಪ್ಟ್‌ ಆಗಿರುತ್ತದೆ.ಟೆಲಿಗ್ರಾಂ ಒಂದಕ್ಕಿಂತ ಹೆಚ್ಚಿನ ಕಡೆ ಲಾಗಿನ್‌ ಆಗಲು ಅವಕಾಶ ನೀಡಿದರೂ ಅದರಲ್ಲಿ ಎಂಡ್‌–ಟು–ಎಂಡ್‌ ಎನ್‌ಕ್ರಿಪ್ಟ್‌ ಫೀಚರ್ ಇಲ್ಲ.
ಒಂದು ವೇಳೆ ಪ್ರೈಮರಿ ಫೋನ್‌ ದೀರ್ಘಕಾಲದವರೆಗೆ ನಿಷ್ಕ್ರೀಯವಾದರೆ ಪ್ರೈಮರಿ ಫೋನ್‌ ಮೂಲಕ ವಾಟ್ಸ್‌ಆ್ಯಪ್‌ ಖಾತೆಗೆ ಲಾಗಿನ್‌ ಆಗಿರುವ ಇತರ ಎಲ್ಲ ಫೋನ್‌ಗಳ ವಾಟ್ಸ್‌ಆ್ಯಪ್‌ ಖಾತೆಗಳು ತನ್ನಿಂತಾನೆ (ಆಟೋಮ್ಯಾಟಿಕಲಿ) ಲಾಗೌಟ್ ಆಗುತ್ತವೆ.

You cannot copy content from Baravanige News

Scroll to Top