ಕಾಪು : ಮೀನುಗಾರರಿಗೆ ಪ್ರಮುಖ 3 ಯೋಜನೆ ಘೋಷಿಸಿದ ರಾಹುಲ್ ಗಾಂಧಿ

ಕಾಪು : ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಮೀನುಗಾರರಿಗೆ ಸಬ್ಸಿಡಿ ದರದಲ್ಲಿ ಡೀಸೆಲ್, ವಿಮೆ, ಹಾಗೂ ಮೀನುಗಾರ ಮಹಿಳೆಯರಿಗೆ ಬಡ್ಡಿ ರಹಿತ ಸಾಲ ಈ ಪ್ರಮುಖ ಮೂರು ಯೋಜನೆಯ ಭರವಸೆಯನ್ನು ರಾಹುಲ್ ಗಾಂಧಿ ಘೋಷಿಸಿದ್ದಾರೆ.

ಕಾಪುವಿನ ಉಚ್ಚಿಲ ಶಾಲಿನಿ ಡಾ.ಜಿ. ಶಂಕರ್ ಸಭಾಂಗಣದಲ್ಲಿ ಆಯೋಜಿಸಿದ ಮೀನುಗಾರರ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೀನುಗಾರರಿಗೆ 10 ಲಕ್ಷ ವಿಮೆ, ಮೀನುಗಾರ ಮಹಿಳೆಯರಿಗೆ ಒಂದು ಲಕ್ಷ ರೂ. ವರೆಗೆ ಬಡ್ಡಿ ರಹಿತ ಸಾಲ ಹಾಗೂ ಪ್ರತಿದಿನ 500 ಲೀಟರ್‌ಗೆ ಮೀನುಗಾರರಿಗೆ 25 ರೂ. ಸಬ್ಸಿಡಿ ನೀಡುವುದಾಗಿ ಭರವಸೆ ನೀಡಿದ್ದಾರೆ.

ಇನ್ನು ಮಂಗಳೂರಿನ ಫಿಷರ್ ಇಸ್ ಕಾಲೇಜನ್ನು ವಿಶ್ವವಿದ್ಯಾಲಯ ಮಾಡಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಡ್ರಜ್ಜಿಂಗ್ ವ್ಯವಸ್ಥಿತ ಯೋಜನೆ ರೂಪಿಸುತ್ತೇವೆ. ನಮ್ಮ ಮುಖ್ಯಮಂತ್ರಿಗಳ ಮೂಲಕ ನಿಮ್ಮ ಬೇಡಿಕೆ ಈಡೇರಿಕೆಯಾಗಲಿದೆ ಎಂದರು.

ಸಿ ಅಂಬುಲೆನ್ಸ್ ವ್ಯವಸ್ಥೆಗೆ ಮಹಿಳೆ ಆಗ್ರಹಿಸಿದ್ದು, ಸಿ ಆಂಬುಲೆನ್ಸ್ ಮಾಡಿಸೋಣ. ಮೀನುಗಾರರ ಜೀವ ಉಳಿಸಲು ಸೀ ಆಂಬುಲೆನ್ಸ್ ಬೇಕು. ಮೀನುಗಾರರು ಸಮುದ್ರದ ಕೃಷಿಕರು. ಮೀನುಗಾರರರಿಗೆ ಪ್ರತ್ಯೇಕ ಒಂದು ಮಂತ್ರಿ ಮಂಡಲ ಮಾಡಬೇಕು. ರೈತರಿಗೆ ಸಿಗುವ ಎಲ್ಲಾ ಸಹಕಾರ ಸಿಗಬೇಕು ಎಂದಿದ್ದಾರೆ.

ಶ್ರೀಮಂತ ಮೀನುಗಾರರ ಜೊತೆ ಬಡ ಮೀನುಗಾರರ ಸ್ಪರ್ಧೆ ನಿಲ್ಲಿಸಬೇಕು. ಮೀನುಗಾರರ ಜೊತೆ ಮತ್ತಷ್ಟು ಆಳವಾದ ಸಂವಾದ ಮಾಡಬೇಕಾಗಿದೆ. ನಾನು ಕೇರಳದಲ್ಲಿ ಮುಂಜಾನೆ 4 ಕ್ಕೆ ಮೀನುಗಾರಿಕೆಗೆ ಹೋಗಿದ್ದೆ. ಮೀನುಗಾರರ ನೋವು ನಲಿವು ನನಗೆ ಗೊತ್ತಿದೆ ಎಂದರು.

ನಮ್ಮ ಸಮುದ್ರ ನಮ್ಮ ಮಕ್ಕಳಿಗೆ ಉಳಿಸಿಕೊಡ್ತೀರಾ? ನಮ್ಮ ಮೀನುಗಾರಿಕಾ ವೃತ್ತಿ ಅನ್ಯರ ಪಾಲಾಗುತ್ತಿದೆ. ನಮ್ಮ ಸಮುದ್ರ ‌ನಮಗೆ ಉಳಿಸಿಕೊಡಿ. ಸಿದ್ದರಾಮಯ್ಯ ಸರ್ಕಾರ ಇದ್ದಾಗ ಮೀನುಗಾರರಿಗೆ ಶೆ.80 ಹಿಡಿತ ಇತ್ತು. ಈಗ ಖಾಸಗಿಯವರ ಪಾಲಾಗುತ್ತಿದೆ ಎಂದು ಮೀನುಗಾರರು ಅಳಲು ತೋಡಿಕೊಂಡಿದ್ದು, ಇದಕ್ಕೆ ಪ್ರತಿಕ್ರಿಯಿಸಿರುವ ರಾಹುಲ್, ನಿಮ್ಮ ಹೋರಾಟ, ಸ್ಪರ್ಧೆ ನನಗೆ ಅರ್ಥವಾಗುತ್ತೆ. ನಿಮ್ಮ‌ಮಕ್ಕಳ ಶಿಕ್ಷಣ ಕಷ್ಟವಾಗಿದೆ, ಅದು‌ ಕೂಡಾ ನನಗೆ ಗೊತ್ತು. ಅನೇಕ ಸಮಸ್ಯೆಗಳಿಂದ ಮೀನುಗಾರರು‌ ಬಳಲಿದ್ದೀರಿ. ಜಿಎಸ್‌ಟಿ ಡೀಸೆಲ್ ಬೆಲೆ ಏರಿಕೆ ಎಲ್ಲಾ ಸಮಸ್ಯೆ ಆಗಿರುವುದು ಗೊತ್ತು. ನಮ್ಮ ಸರ್ಕಾರ ಬರುತ್ತಿದ್ದಂತೆ‌ ಖಚಿತ ಯೋಜನೆ ರೂಪಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಸಹಸ್ರ ಸಂಖ್ಯೆಯಲ್ಲಿ ‌ಮೀನುಗಾರ ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

You cannot copy content from Baravanige News

Scroll to Top