ಉಡುಪಿ, ಏ.28: ಉಡುಪಿ ವಿದಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ, ಪ್ರಖರ ಹಿಂದುತ್ವವಾದಿ ಯಶ್ಪಾಲ್ ಸುವಣ೯ ಗೆಲುವು ಮುಂದಿನ ನವಉಡುಪಿ ಯ ಅಭಿವೃದ್ಧಿಯ ದಿಕ್ಸೂಚಿ ಎಂದು ಉಡುಪಿ ಬಿಜೆಪಿ ನಗರಾಧ್ಯಕ್ಷರಾದ ಮಹೇಶ್ ಠಾಕೂರ್ ತಿಳಿಸಿದರು.
ಇಂದು ಉಡುಪಿ ಬೈಲೂರಿನ ಕಾರ್ಯಕರ್ತರ ಮನೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಮಹೇಶ್ ಠಾಕೂರ್ ಉಡುಪಿಯಲ್ಲಿ ಡಾ.ವಿಸ್ ಆಚಾರ್ಯರಿಂದ ಆರಂಭಗೊಂಡ ಉಡುಪಿಯ ಅಭಿವೃದ್ಧಿಯ ಶಕೆ ಉಡುಪಿ ಶಾಸಕರಾದ ಕೆ ರಘುಪತಿ ಭಟ್ ರಿಂದ ಮುಂದುವರಿದು ಯಶ್ಪಾಲ್ ಸುವರ್ಣರಿಂದ ಮತ್ತೊಂದು ದೆಶೆಗೆ ತೆರಳಲಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಬಿಜೆಪಿ ವಕ್ತಾರರಾದ ಕೆ ರಾಘವೇಂದ್ರ ಕಿಣಿ, ಮಹಾಶಕ್ತಿ ಕೇಂದ್ರದ ಅಧ್ಯಕ್ಷರು ರಂಜಿತ್,ಬೈಲೂರ್ ವಾರ್ಡ್ ನ ಬೂತ್ ಅಧ್ಯಕ್ಷರುಗಳಾದ ರಘುನಾಥ್ ,ರಮೇಶ್,ಗಣೇಶ ಉರಾಲ್ ಹಾಗೂ ಮಾಜಿ ನಗರ ಸಭಾ ಸದಸ್ಯರಾದ ನವೀನ್ ಭಂಡಾರಿ ಹಾಗೂ ಬೈಲೂರ್ ವಾರ್ಡ್ ನ ಎಲ್ಲಾ ಕಾರ್ಯಕರ್ತರು ಉಪಸ್ಥಿತರಿದ್ದರು.