ಕಾರವಾರ : ಶಿವಮೊಗ್ಗ ದಿಂದ ಕುಮಟಾಕ್ಕೆ ಆಟೋದಲ್ಲಿ ಅಕ್ರಮವಾಗಿ 93.50 ಲಕ್ಷ ಹಣ ಸಾಗಿಸುತ್ತಿದ್ದಾಗ , ಫ್ಲೈಯಿಂಗ್ ಸ್ಕ್ವಾಡ್ ಗೆ ಅಕ್ರಮ ಸಾಗಾಟದವರು ಸಿಕ್ಕಿ ಬಿದ್ದಿದ್ದಾರೆ .ಕುಮಟಾ ತಾಲೂಕಿನ ಚಂದಾವರ ಚೆಕ್ ಪೋಸ್ಟ್ ಬಳಿ ಈ ಘಟನೆ ಶುಕ್ರವಾರ ನಸುಕಿನ 2.30 ರ ವೇಳೆಗೆ ನಡೆದಿದೆ.
ಆಟೋ ಚಾಲಕ ಹಾಗೂ ಆಟೋದಲ್ಲಿದ್ದ ಮತ್ತೊಬ್ಬ ವ್ಯಕ್ತಿಯನ್ನು ಹಣ ಸಮೇತ ವಶಕ್ಕೆ ಪಡೆಯಲಾಗಿದೆ. ಕುಮಟಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೊನ್ನಾವರ ತಾಲೂಕಿನ ಚಂದಾವರ ಚೆಕ್ ಪೋಸ್ಟ್ ನಲ್ಲಿ ದಾಖಲೆಯಿಲ್ಲದೆ ಆಟೋ-ರಿಕ್ಷಾದಲ್ಲಿ 93ಲಕ್ಷದ 50 ಸಾವಿರ ರೂ ಗಳನ್ನು ಎಸ್.ಎಸ್.ಟಿ. ತಂಡ ಮತ್ತು ಫ್ಲೈಯಿಂಗ್ ಸ್ಕ್ವಾಡ್ ತಂಡದವರು ವಶಪಡಿಸಿಕೊಂಡಿದ್ದು, ಹಣವನ್ನು ಉಪಖಜಾನೆ ಕುಮಟಾದಲ್ಲಿ ನಿಯಮಾನುಸಾರ ಇರಿಸಲಾಗಿದೆ. ಈ ಹಣ ಯಾರಿಗೆ ಸೇರಿದ್ದು, ಯಾವ ಪಕ್ಷಕ್ಕೆ ಸೇರಿದ್ದು ಎಂಬ ತನಿಖೆ ನಡೆಯುತ್ತಿದೆ.
ಜಿಲ್ಲಾ ಚುನಾವಣಾ ಶಾಖೆ ಅಕ್ರಮ ಹಣ ಸಾಗಾಟದ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ಬಿಡುಗಡೆ ಮಾಡಿದೆ.