ಉಡುಪಿ ಎ.29: ನಗರದ ಜುವೆಲ್ಲರಿ ಶಾಪ್‌ಗೆ ಗ್ರಾಹಕರ ಸೋಗಿನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು 1.20 ಲಕ್ಷ ರೂ.ಮೌಲ್ಯದ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿರುವ ಬಗ್ಗೆ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಎಸ್. ಕಿಶೋರ್ ಆಚಾರ್ಯ ಎಂಬವರಿಗೆ ಸೇರಿದ ಉಡುಪಿ ಕನಕದಾಸ ರಸ್ತೆಯಲ್ಲಿರುವ ಜುವೆಲ್ಲರಿ ಶಾಪ್‌ನಲ್ಲಿ ಕಳ್ಳತನ ನಡೆದಿದೆ. ಎ.27 ರಂದು ಸಂಜೆ ವೇಳೆ ಜುವೆಲ್ಲರಿ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಮೂಗುತಿ ಬಗ್ಗೆ ಕೇಳಿದ್ದರು. ಈ ವೇಳೆ ಅಂಗಡಿಯಲ್ಲಿದ್ದ ಎಸ್ ಕಿಶೋರ್ ಆಚಾರ್ಯ ಅವರ ಹೆಂಡತಿ ವ್ಯಕ್ತಿಗಳಿಗೆ ಚಿನ್ನದ ಮೂಗುತಿ ಇರುವ ಪ್ಯಾಕೇಟ್ ಗಳನ್ನು ತೋರಿಸಿದ್ದರು. ಆರೋಪಿಗಳು ಸ್ವಲ್ಪ ಹೊತ್ತು ಮಾತನಾಡುತ್ತಾ ಮೂಗುತಿಗಳನ್ನು ನೋಡಿ, ಅದರಲ್ಲಿದ್ದ 1,20,000 ಲಕ್ಷ ರೂ. ಮೌಲ್ಯದ 20 ಗ್ರಾಂ ತೂಕದ 1 ಮೂಗುತಿ ಪ್ಯಾಕೇಟ್‌ನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ, ಈ ಬಗ್ಗೆ ಎಸ್. ಕಿಶೋರ್ ಆಚಾರ್ಯ ಅವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.