ಮೂಲ್ಕಿ: ಈ ಬಾರಿಯ ನಿರ್ಧಾರ, ಬಹುಮತದ ಬಿಜೆಪಿ ಸರ್ಕಾರ’ ಎಂದು ಮುಲ್ಕಿ ಬಿಜೆಪಿ ಸಮಾವೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಿದ್ದಾರೆ.
ಮೂಡುಬಿದಿರೆ ಕ್ಷೇತ್ರದ ಮುಲ್ಕಿಯಲ್ಲಿ ನಡೆಯುತ್ತಿರುವ ಬಿಜೆಪಿ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ ಮಾಡುತ್ತಿದ್ದಾರೆ.
ಈ ವೇಳೆ ಮುಲ್ಕಿ ವೆಂಕಟರಮಣ ಸ್ವಾಮಿಗೆ ನನ್ನ ನಮಸ್ಕಾರಗಳು. ದೇಶದ ಜನರೇ ನಮ್ಮ ರಿಮೋಟ್ ಕಂಟ್ರೋಲ್. ಕರ್ನಾಟಕವನ್ನು ದೇಶದಲ್ಲೇ ನಂ.1 ಮಾಡುವುದು ಬಿಜೆಪಿಯ ಸಂಕಲ್ಪ. ನಮ್ಮ ನಾಯಕರು ನಿವೃತ್ತಿ ಹೊಂದುತ್ತಿದ್ದು, ಈ ಬಾರಿ ನಮಗೆ ಅವಕಾಶ ಕೊಡಿ ಎಂದು ಕಾಂಗ್ರೆಸ್ ಮತಯಾಚನೆ ಮಾಡುತ್ತಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ನಾನು ನೋಡುತ್ತಿದ್ದೇನೆ, ಸಣ್ಣ ಮಕ್ಕಳೂ ಬಿಜೆಪಿ ಬೆಂಬಲಿಸುತ್ತಿದ್ದಾರೆ ಎಂದಿದ್ದಾರೆ. ಕರ್ನಾಟಕವನ್ನು ಮೂಲಸೌಕರ್ಯ, ತಯಾರಿಕೆ, ಕೃಷಿ ಕ್ಷೇತ್ರದಲ್ಲಿ ನಂಬರ್ ವನ್ ಮಾಡಬೇಕು ಎಂದರೆ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದರು.
ತುಳುವಿನಲ್ಲೇ ಆರಂಭ:
ಸಾಮಾನ್ಯವಾಗಿ ಕರ್ನಾಟಕದಲ್ಲಿ ಬಂದಾಗ ಕನ್ನಡದಲ್ಲಿ ಭಾಷಣ ಪ್ರಾರಂಭಿಸುವ ಮೋದಿ ಅವರು ಇಂದು ತುಳು ಭಾಷೆಯಲ್ಲಿ ಮಾತು ಪ್ರಾರಂಭಿಸಿ ಗಮನಸೆಳೆದಿದ್ದಾರೆ.
“ಪರಶುರಾಮ ಕ್ಷೇತ್ರದ ಎನ್ನ ಮೋಕೆದ ತುಳು ಅಪ್ಪೆ ಜೋಕುಲೆಗ್ ಸೊಲ್ಮೆಲು” ಭಾಷಣ ಆರಂಭಿಸಿದ ಪ್ರಧಾನಿ ಮೋದಿ, ಭಜರಂಗಬಲಿಗೆ ಜೈ ಎನ್ನುವ ಮೂಲಕ ಕಾಂಗ್ರೆಸ್ ಗೆ ಟಾಂಗ್ ನೀಡಿದರು. ಜೊತೆಯಲ್ಲಿ ಕಳೆದ ಬಾರಿ ಶಿವಗಿರಿಯ ಭೇಟಿ ವೇಳೆ ನಾರಯಣಗುರುವಿನ ಅಶೀರ್ವಾದ ದೊಡ್ಡ ಅವಕಾಶ ಸಿಕ್ಕಿದೆ” ಎನ್ನುವ ಮೂಲಕ ಬಿಲ್ಲವ ಸಮುದಾಯ ಮನಗೆಲ್ಲುವ ಯತ್ನಿಸಿದರು.