ಕೋವಿಡ್ ನಿರ್ವಹಣೆ ವೇಳೆ ಅವ್ಯವಹಾರ ಅರೋಪ; ಬಿ.ಎಸ್.ವೈ ಸೇರಿ 28 ಜನರ ವಿರುದ್ಧ ಲೋಕಯುಕ್ತಕ್ಕೆ ದೂರು

ಬೆಂಗಳೂರು, ಮೇ 04: ಬರೋಬ್ಬರಿ 821.22 ಕೋಟಿ ಬೃಹತ್ ಮೊತ್ತದ ಹಗರಣ ನಡೆಸಿದ ಆರೋಪ ಹಿನ್ನೆಲೆ ಮಾಜಿ ಸಿಎಂ ಬಿ.ಎಸ್​​ ಯಡಿಯೂರಪ್ಪ ಸಚಿವರು ಮತ್ತು ಐಎಎಸ್​ ಅಧಿಕಾರಿಗಳು ಸೇರಿದಂತೆ ಒಟ್ಟು 28 ಜನರ ವಿರುದ್ಧ ಲೋಕಾಯುಕ್ತಗೆ ದೂರು ನೀಡಲಾಗಿದೆ.

ದಾಖಲೆ ಸಮೇತ ಆರ್​ಟಿಐ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಎನ್ನುವವರಿಂದ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಕೊವಿಡ್​ ನಿರ್ವಹಣೆ ವೇಳೆ ಬಿಬಿಎಂಪಿಯಿಂದ ಕೋಟ್ಯಂತರ ಅವ್ಯವಹಾರ, ಆಂಬ್ಯುಲೆನ್ಸ್ ಖರೀದಿ ನೆಪದಲ್ಲಿ ಹೆಚ್ಚಿನ ವಾಹನಗಳ ಸಂಖ್ಯೆ ತೋರಿಸಿದ್ದಾರೆ. ಆ ಸಂದರ್ಭದಲ್ಲಿ ಬಿ.ಎಸ್. ಯಡಿಯೂರಪ್ಪ ಕೊವಿಡ್​ ವಲಯವಾರು ಉಸ್ತುವಾರಿಯಾಗಿದ್ದರು. ಸಚಿವರಾದ ವಿ.ಸೋಮಣ್ಣ ಅಶ್ವತ್ಥ್ ನಾರಾಯಣ, ಸುರೇಶ್ ಕುಮಾರ್, ಎಸ್.ಟಿ.ಸೋಮಶೇಖರ್, ಗೋಪಾಲಯ್ಯ ಜೋನಲ್ ಮ್ಯಾನೇಜ್​ಮೆಂಟ್ ನಿರ್ವಹಿಸಿದ್ದರು ಎಂದಿದ್ದಾರೆ.

IAS ಅಧಿಕಾರಿಗಳಾದ ಗೌರವ್ ಗುಪ್ತಾ, ಪಿ.ಸಿ.ಜಾಫರ್​, ಮನೋಜ್ ಕುಮಾರ್ ಮೀನಾ, ರವಿಕುಮಾರ್, ವಿ.ಅನ್ಬುಕುಮಾರ್, ಉಜ್ವಲ್ ಕುಮಾರ್, ಪಂಕಜ್ ಕುಮಾರ್ ಕೋಆರ್ಡಿನೇಟ್​ ಮಾಡುತ್ತಿದ್ದರು. 821 ಕೋಟಿಗೂ ಹೆಚ್ಚು ಅವ್ಯವಹಾರದಲ್ಲಿ 28 ಜನರು ಭಾಗಿಯಾಗಿದ್ದಾರೆ. ಕೊವಿಡ್ ವೇಳೆ ಬೆಂಗಳೂರನ್ನು 8 ವಲಯಗಳಾಗಿ ವಿಂಗಡಿಸಿದ್ದರು. ಸಾವಿರಾರು ಆ್ಯಂಬುಲೆನ್ಸ್​ಗಳನ್ನು ಖರೀದಿಸುವುದಾಗಿ ನಕಲಿ ದಾಖಲೆ ಸೃಷ್ಟಿಸಿದ್ದಾರೆ.

ಆ್ಯಂಬುಲೆನ್ಸ್ ಹೊರತಾದ ವಾಹನಗಳ ನೋಂದಣಿ ಸಂಖ್ಯೆಗಳಿವೆ. ಬಿಎಸ್​ವೈ ಪುತ್ರ ಬಿ.ವೈ.ವಿಜಯೇಂದ್ರ ಆಪ್ತ ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಹಗರಣದಲ್ಲಿ ಬಹುಪಾಲು ಸರ್ಕಾರಿ ಅಧಿಕಾರಿಗಳು ಭಾಗಿಯಾಗಿದ್ದಾರೆ‌. ಕೊವಿಡ್ ವೇಳೆ ಜನರ ಹೆಣ ಮಾರಿ ಹಣ ಮಾಡಿದ್ದಾರೆ. ಟ್ರಾವೆಲ್ಸ್​ನಲ್ಲಿ ಖರೀದಿ ಮಾಡಿರುವುದಾಗಿ ದಾಖಲೆ ಸೃಷ್ಟಿಸಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು FIR ದಾಖಲಿಸಿ ತನಿಖೆ ಮಾಡಬೇಕಿದೆ. ಒಂದು ವೇಳೆ ದಾಖಲಿಸದಿದ್ದರೆ ಮುಂದೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಚ್ಚರಿಕೆ ನೀಡಲಾಗಿದೆ.

You cannot copy content from Baravanige News

Scroll to Top