ಶಿರ್ವ: ಬೆಳ್ಳೆ ಗ್ರಾ.ಪಂ. ವ್ಯಾಪ್ತಿಯ ತಿರ್ಲಪಲ್ಕೆ ಸರಕಾರಿ ಕೆರೆಯಲ್ಲಿ ಮೇ.6 ರಂದು ಬೆಳಗ್ಗೆ ಹೆಣ್ಣು ಮಗುವಿನ ಮೃತದೇಹವೊಂದು ಪತ್ತೆಯಾಗಿದೆ.
ಬೆಳ್ಳೆ ಗ್ರಾ.ಪಂ. ಒಂದನೇ ವಾರ್ಡಿನ ಸದಸ್ಯ ಅಶೋಕ್ ಕರೆ ಮಾಡಿ ತಿಳಿಸಿದಂತೆ ಬೆಳ್ಳೆ ಗ್ರಾ.ಪಂ.ಅಧ್ಯಕ್ಷ ಸುಧಾಕರ ಪೂಜಾರಿ ತಿರ್ಲಪಲ್ಕೆ ಕೆರೆಯ ಬಳಿ ಬಂದು ನೋಡಿದಾಗ ಕೆರೆಯ ಬದಿಯಲ್ಲಿ ಹೆಣ್ಣು ಮಗುವಿನ ಮೃತದೇಹ ಬಿದ್ದುಕೊಂಡಿತ್ತು.
ಮೃತದೇಹವನ್ನು ರಹಸ್ಯವಾಗಿ ಬಚ್ಚಿಡುವ ಉದ್ದೇಶದಿಂದ ಮಗುವಿನ ವಾರೀಸುದಾರರು ಮೃತದೇಹವನ್ನು ಕೆರೆಯ ಬಳಿ ಬಿಸಾಡಿ ಹೋಗಿರುವುದು ಕಂಡುಬಂದಿದೆ. ಕೃತ್ಯವೆಸಗಿದ ಮಗುವಿನ ವಾರೀಸುದಾರರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬೆಳ್ಳೆ ಗ್ರಾ.ಪಂ. ಅಧ್ಯಕ್ಷ ಸುಧಾಕರ ಪೂಜಾರಿ ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ಳೆ: ಕೆರೆಯಲ್ಲಿ ಹೆಣ್ಣು ಮಗುವಿನ ಮೃತದೇಹ ಪತ್ತೆ..!!!
