ತಂಗಿಯ ಮುಟ್ಟು: ರಕ್ತ ನೋಡಿ ದೈಹಿಕ ಸಂಪರ್ಕವೆಂದು ಸಂಶಯಪಟ್ಟ ಅಣ್ಣನಿಂದ ಹತ್ಯೆ

ಮಹಾರಾಷ್ಟ್ರ: (ಥಾಣೆ) ಅಣ್ಣನೊಬ್ಬ ತನ್ನ ತಂಗಿ ಹಲ್ಲೆಗೈದು ಹತ್ಯೆಗೈದಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.

ಅಪ್ರಾಪ್ತ ಬಾಲಕಿ ತನ್ನ ಸಹೋದರ ಮತ್ತು ಅತ್ತಿಗೆಯೊಂದಿಗೆ ವಾಸಿಸುತ್ತಿದ್ದಳು. 12 ವರ್ಷದ ಬಾಲಕಿಗೆ ಪೀರಿಯೆಡ್‌ (ಮುಟ್ಟು) ಆಗಿದೆ. ಇದರಿಂದ ತೀರ ನೋವು ಅನುಭವಿಸಿದ ಬಾಲಕಿಗೆ ರಕ್ತಸ್ರಾವ ಆಗಿದೆ. ಬಟ್ಟೆಯ ಮೇಲೆ ರಕ್ತದ ಕಲೆಯನ್ನು ನೋಡಿದ ಅಣ್ಣ ತನ್ನ ತಂಗಿಯ ಮೇಲೆ ಸಂಶಯಪಟ್ಟಿದ್ದಾನೆ.

ತಂಗಿ ದೈಹಿಕ ಸಂಪರ್ಕ ಮಾಡಿದ್ದಾಳೆ ಎಂದು ಆಕೆಯನ್ನು ಸಂಶಯ ದೃಷ್ಟಿಯಿಂದ ನೋಡಿದ ಅಣ್ಣ ತಂಗಿಯ ಬಳಿ ವಿಚಾರಿಸಿದ್ದಾನೆ. ಆದರೆ ತಂಗಿಗೆ ಮುಟ್ಟಿನ ಬಗ್ಗೆ ಸರಿಯಾದ ಅರಿವಿಲ್ಲದ ಕಾರಣ ಆಕೆ ಅಣ್ಣನ ಮಾತಿಗೆ ಸರಿಯಾಗಿ ಉತ್ತರ ನೀಡಿಲ್ಲ. ಇದೇ ಕಾರಣದಿಂದ ಮತ್ತಷ್ಟು ಸಿಟ್ಟಾಗಿ ತಂಗಿ ಮೇಲೆ ಹಲ್ಲೆ ನಡೆಸಿ, ದೇಹದ ನಾನಾ ಭಾಗಕ್ಕೆ ಹಾನಿ ಮಾಡಿದ್ದಾನೆ.

ತೀವ್ರ ಗಾಯಗೊಂಡ ಆಕೆಯನ್ನುಆಸ್ಪತ್ರೆಗೆ ಕರೆ ತಂದಿದ್ದಾರೆ. ಆದರೆ ಆದಾಗಲೇ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಪೀರಿಯೆಡ್‌ ವಿಚಾರ ಬೆಳಕಿಗೆ ಬಂದಿದೆ.

ಪೊಲೀಸರು ಸೆಕ್ಷನ್‌ 302 ರ ಅಡಿಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

Scroll to Top