ಕಾರ್ಕಳ, ಮೇ 11: ಅಪ್ರಾಪ್ತ ಯುವಕನೊಬ್ಬ ನಕಲಿ ಮತದಾನ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದು ಲಾಠಿ ಬೀಸಿದ ಘಟನೆ ಕಾರ್ಕಳ ತಾಲೂಕಿನ ಮಿಯ್ಯಾರು ಕುಂಟಿಬೈಲ್ ಮತಗಟ್ಟೆಯಲ್ಲಿ ಬುಧವಾರ ರಾತ್ರಿ ನಡೆದಿದೆ.
ಬಗ್ಗೆ ಮತಯಂತ್ರ ಹಾಗೂ ಚುನಾವಣಾ ಸಿಬ್ಬಂದಿಗಳು ಸಂಚರಿಸಬೆಕಾಗಿದ್ದ ಬಸ್ ಅನ್ನು ಕಾಂಗ್ರೆಸ್ ಕಾರ್ಯಕರ್ತರು ತಡೆ ಹಿಡಿದಿದ್ದಾರೆ. ಬಿಜೆಪಿ ಕಾರ್ಯಕರ್ತರು ನಕಲಿ ಮತದಾನ ಮಾಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಸದಸ್ಯರು ಪೋಲೀಸರ ಜೊತೆ ವಾಗ್ವಾದ ನಡೆಸಿದರು.
ಮುಂಜಾನೆ ಮತಯಂತ್ರ ಕೈಕೊಟ್ಟ ಕಾರಣ ಒಂದು ಗಂಟೆ ತಡವಾಗಿ ಮತದಾನ ಅರಂಭವಾಗಿತ್ತು.
ಕಾರ್ಕಳ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 209 ಬೂತ್ ಗಳಲ್ಲಿ ಒಟ್ಟು 154938 ಮತಗಳು ಚಲಾವಣೆಯಾಗಿವೆ. ಶೇಕಡಾ 81.30% ಮತದಾನವಾಗಿದೆ.