ಕುಂದಾಪುರ: ಮೂಕಾಂಬಿಕ ಸನ್ನಿಧಿಯಲ್ಲಿ ದಿ ಕೇರಳ ಸ್ಟೋರಿ ಪ್ರೊಮೋಷನ್ ಬ್ಯಾನರ್; ತೀವ್ರ ಚರ್ಚೆ

ಕುಂದಾಪುರ, ಮೇ.16: ವಿಧಾನಸಭೆ ಚುನಾವಣೆ ನಡೆದು‌ ಉಡುಪಿ ಜಿಲ್ಲೆ ಬಿಜೆಪಿ ಪಾಲಾಗಿರುವುದರ ಬೆನ್ನಲ್ಲೇ ಪವಿತ್ರ ಕ್ಷೇತ್ರವಾದ ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿ ಈಗ ಕೇರಳ ಕಥೆಯ ಸಿನೆಮಾವೊಂದರ ಪ್ರೊಮೋಷನ್ ಸೆಂಟರ್ ಆಗಿರುವ ಘಟನೆ ನಡೆದಿದೆ.

ಕೊಲ್ಲೂರು ಶ್ರೀ ಮೂಕಾಂಬಿಕೆಯ ದೇವಿಯ ಸನ್ನಿಧಿಯಲ್ಲಿ ದಿ ಕೇರಳ ಸ್ಟೋರಿ ಎನ್ನುವ ಸಿನೆಮಾ ನೋಡುವಂತೆ ಹೇಳುವ ಬರಹವಿರುವ ಫ್ಲೆಕ್ಸ್ ಬ್ಯಾನರ್ ನ್ನು ಯಾರೋ ಹಾಕಿದ ಪರಿಣಾಮ ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ.

ಮೂಕಾಂಬಿಕಾ ದೇವಸ್ಥಾನದ ಹಿಂಬದಿ ಗೇಟ್ ಬಳಿ ಯಾರೋ ಕೇರಳ ಭಕ್ತರನ್ನುದ್ದೇಶಿಸಿ MALAYALEE DEVOTEES. WELCOME TO MOOKAMBIKA. “If you want your generations also to be devotees of Ma Mookambika. please watch THE KERALA story” ಎಂಬ 10×8 ಸೈಝಿನ ಬ್ಯಾನರ್ ಅಳವಡಿಸಿದ್ದಾರೆ.

ಬ್ಯಾನರ್ ಯಾರು ಹಾಕಿದ್ದಾರೆ ಎನ್ನುವ ಬಗ್ಗೆ ಇನ್ನೂ ಮಾಹಿತಿ ಲಭಿಸಿಲ್ಲ. ಇದರಿಂದ ಕೇರಳದ ಭಕ್ತರಿಗೆ ಮುಜುಗರವಾಗುತ್ತಿದೆ ಎಂದು ಕೆಲವು ಭಕ್ತರು ಹೇಳಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ಸಂಬಂಧಪಟ್ಟವರು ಯಾವ ಕ್ರಮ ಕೈಗೊಳ್ಳುತ್ತಾರೆ ಕಾದು ನೋಡಬೇಕಿದೆ.

ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಶೆಟ್ಟಿಯವರು ದೂರವಾಣಿ ಮೂಲಕ ಪ್ರತಿಕ್ರಿಯಿಸಿ, ಬ್ಯಾನರ್ ದೇವಸ್ಥಾನದ ಆವರಣದ ಹೊರಗಿದೆ. ನಾನಿನ್ನೂ ಅದನ್ನು ನೋಡಿಲ್ಲ. ಪರಿಶೀಲಿಸುತ್ತೇನೆ ಎಂದಿದ್ದಾರೆ.

Scroll to Top