ಮೇ 20, 21ಕ್ಕೆ ಸಿಇಟಿ: ದ.ಕ., ಉಡುಪಿ ಸೇರಿ 21,825 ಪರೀಕ್ಷಾರ್ಥಿಗಳು

ಮಣಿಪಾಲ/ಮಂಗಳೂರು: ಸಿಇಟಿ ಪರೀಕ್ಷೆಗಳು ಮೇ 20 ಮತ್ತು 21ರಂದು ನಡೆಯಲಿದ್ದು ದಕ್ಷಿಣ ಕನ್ನಡ ಜಿಲ್ಲೆಯ 27 ಕೇಂದ್ರಗಳಲ್ಲಿ ಮತ್ತು ಉಡುಪಿ ಜಿಲ್ಲೆಯ 12 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

ದ.ಕ. ಜಿಲ್ಲೆಯಿಂದ 16,113 ಮತ್ತು ಉಡುಪಿ ಜಿಲ್ಲೆಯಿಂದ 5,712 ವಿದ್ಯಾರ್ಥಿಗಳ ಸಹಿತ ಒಟ್ಟು 21,825 ಮಂದಿ ಪರೀಕ್ಷೆಗೆ ಹಾಜರಾಗಲಿದ್ದಾರೆ ಎಂದು ದ.ಕ. ಡಿಡಿಪಿಯು ಜಯಣ್ಣ ಮತ್ತು ಉಡುಪಿ ಜಿ.ಪಂ. ಸಿಇಒ ಪ್ರಸನ್ನ ಎಚ್‌. ತಿಳಿಸಿದ್ದಾರೆ.

ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದೊಳಗೆ ವಾಚ್‌, ಮೊಬೈಲ್‌ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ತರುವುದನ್ನು, ತುಂಬು ತೋಳಿನ ಶರ್ಟ್‌ ಹಾಗೂ ಆಭರಣಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ. ಪ್ರವೇಶ ಪತ್ರದ ಜತೆ ಯಾವುದಾದರೊಂದು ಗುರುತಿನ ಚೀಟಿಯನ್ನು (ಕಾಲೇಜಿನ ಗುರುತಿನ ಚೀಟಿ, ಬಸ್‌ ಪಾಸ್‌, ಡ್ರೈವಿಂಗ್‌ ಲೈಸನ್ಸ್‌, ಪಾಸ್‌ಪೋರ್ಟ್‌, ಆಧಾರ್‌ ಕಾರ್ಡ್‌, ಪಾನ್‌ ಕಾರ್ಡ್‌) ತರಬೇಕಿದೆ. ಮೇ 23ರಿಂದ ಜೂ. 3ರ ವರೆಗೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗಳು ನಡೆಯಲಿವೆ.

You cannot copy content from Baravanige News

Scroll to Top