ಉಡುಪಿ: ಆನ್‌ಲೈನ್‌‌ನಲ್ಲಿ ದ್ವಿಚಕ್ರ ವಾಹನ ಖರೀದಿಸಲು ಹೋಗಿ ವ್ಯಕ್ತಿಯೋರ್ವರಿಗೆ 69 ಸಾವಿರ ರೂ ವಂಚನೆ

ಉಡುಪಿ, ಮೇ.20: ಆನ್‌ಲೈನ್ ಮೂಲಕ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಸಲು ಹೋಗಿ ವ್ಯಕ್ತಿಯೊಬ್ಬರು ವಂಚನೆಗೆ ಒಳಗಾದ ಘಟನೆ ಉಡುಪಿಯ ನಡೆದಿದೆ.

ರಾಜೇಶ್ ಅಮೀನ್ ಎನ್ನುವವರು ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀಸುವ ಉದ್ದೇಶದಿಂದ ಆನ್‌ಲೈನ್‌‌ನಲ್ಲಿ ಓಲಾ ಎಲೆಕ್ಟ್ರಿಕಲ್ ಮೊಬಿಲಿಟಿ ಪ್ರೈ.ಲಿಮಿಟೆಡ್(OLA Electrical Mobility Prv.ltd)ಎಂಬ ವೆಬ್‌ಸೈಟ್‌ನಲ್ಲಿ ಹುಡುಕಾಡಿದ್ದಾರೆ. ಈ ಸಂದರ್ಭ ವೆಬ್‌ಸೈಟ್‌ನಲ್ಲಿ ದೊರಕಿದ ದೂರವಾಣಿ ಸಂಖ್ಯೆಗೆ ಸಂಪರ್ಕಿಸಿದಾಗ ಅಪರಿಚಿತ ವ್ಯಕ್ತಿ ಬ್ಯಾಂಕಿನ ವಿವರ ಮುಂಗಡವಾಗಿ ಹಣ ಪಾವತಿಸುವಂತೆ ತಿಳಿಸಿದ್ದಾನೆ.

ಅಪರಿಚಿತನ ಮಾತಿನಂತೆ 30,000/-, 38,940/- ಮತ್ತು ರೂಪಾಯಿ 499/- ರಂತೆ ಒಟ್ಟು ರೂಪಾಯಿ 69,439/- ಹಣವನ್ನು ಆನ್‌ಲೈನ್ ಮೂಲಕ ರಾಜೇಶ್ ವರ್ಗಾವಣೆ ಮಾಡಿದ್ದಾರೆ. ಓಲಾ ಎಲೆಕ್ಟ್ರಿಕಲ್ ಮೊಬಿಲಿಟಿ ಪ್ರೈ.ಲಿಮಿಟೆಡ್(OLA Electrical Mobility Prv.ltd) ಎಂಬ ಕಂಪೆನಿಯವನೆಂದು ಹೇಳಿ ಹಣವನ್ನು ಪಡೆದು ದ್ವಿಚಕ್ರ ವಾಹನ ನೀಡದೇ, ಹಣವನ್ನೂ ನೀಡದೆ ವಂಚಿಸಿದ್ದಾನೆ ಎಂದು ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ವಂಚನೆಗೊಳಗಾದ ರಾಜೇಶ್ ಅಮೀನ್ ದೂರು ದಾಖಲಿಸಿದ್ದಾರೆ.

You cannot copy content from Baravanige News

Scroll to Top