ಆಂಧ್ರ ಪ್ರದೇಶ, ಜೂ 07: ಮದ್ಯ ತುಂಬಿದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಆಂಧ್ರ ಪ್ರದೇಶದ ಕಸಿಮ್‌ಕೋಟಾ ಮಂಡಲ ಜಿಲ್ಲೆಯಲ್ಲಿ ನಡೆದಿದೆ.
ಲಾರಿ ಬಿದ್ದ ರಭಸಕ್ಕೆ ಲಾರಿಯಲ್ಲಿದ್ದ ಸುಮಾರು 200 ಕೇಸ್ ನಷ್ಟು ಬಿಯರ್ ಬಾಟಲ್ ಗಳು ರಸ್ತೆಯಲ್ಲಿ ಚೆಲ್ಲಲ್ಪಟ್ಟಿದೆ.
ಇದನ್ನು ಕಂಡ ಜನರು ಓಡೋಡಿ ಬಂದಿದ್ದಾರೆ. ಒಡೆದು ಹೋಗದ ಬಿಯರ್ ಬಾಟಲ್ ನ್ನು ಜನರು ಮುಗಿ ಬಿದ್ದು ಸಂಗ್ರಹಿಸಿದ್ದಾರೆ.
ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಾ ಇದೆ.