ಕಳೆದ ವರ್ಷ ದೇಶಾದ್ಯಂತ ಚರ್ಚೆ ಹುಟ್ಟುಹಾಕಿದ್ದ ಕ್ಷಮಾ ಬಿಂದು ಅವರು ಮೊದಲ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ತನ್ನನ್ನು ತಾನೇ ಮದುವೆಯಾಗುವ ಮೂಲಕ ಸಂಚಲನ ಸೃಷ್ಟಿಸಿದ್ದ ಕ್ಷಮಾ, ಈಗ ಮೊದಲ ವರ್ಷ ವೈವಾಹಿಕ ಜೀವನ ಪೂರ್ಣಗೊಳಿಸಿದ ಸಂಭ್ರಮದಲ್ಲಿದ್ದಾರೆ. ಈ ಕುರಿತ ಪೋಸ್ಟ್ ಎಲ್ಲೆಡೆ ಸದ್ದು ಮಾಡುತ್ತಿದೆ.
ಸಾಂಪ್ರದಾಯಿಕವಾಗಿ ನಡೆದ ಸಮಾರಂಭದಲ್ಲಿ ತನ್ನನ್ನು ತಾನೇ ಸ್ವಯಂ ವಿವಾಹವಾಗುವ ಮೂಲಕ ಸುದ್ದಿಯಲ್ಲಿದ್ದ ಗುಜರಾತ್ನ ವಡೋದರಾದ 24 ವರ್ಷದ ಮಹಿಳೆ ಕ್ಷಮಾ ಬಿಂದು ಕಳೆದ ವರ್ಷ ಜೂನ್ 8ರಂದು ‘ಸ್ವಯಂ’ ವಿವಾಹವಾಗಿದ್ರು. ಇದರಿಂದ ಸಾಕಷ್ಟು ಟೀಕೆಗೆ ಈಕೆ ಗುರಿಯಾಗಿದ್ರು. ಅನಗತ್ಯ ಪ್ರಚಾರಕ್ಕೆ ಹೀಗೆ ಮಾಡ್ತಿದ್ದಾರೆ ಎಂದು ನೆಟ್ಟಿಗರು ಕಿಡಿಕಾರಿದ್ದರು. ಆದರೆ ಕೆಲವರು, ಇದು ಆಕೆಯ ಜೀವನ ಅವರ ಖುಷಿ ಮುಖ್ಯ ಎಂದು ಬೆಂಬಲಿಸಿದ್ದರು.
ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿರುವ ಕ್ಷಮಾ ಸೊಲೊಗಮಿ ಪದ್ದತಿಯ ನಿರ್ಧಾರವು ಅನೇಕರ ಹುಬ್ಬೇರಿಸುವಂತೆ ಮಾಡಿತ್ತು. ಅಂದು ಆಕೆಯ ಮದುವೆಯಲ್ಲಿ ಸ್ನೇಹಿತರು, ಆಪ್ತರು ಭಾಗಿಯಾಗಿದ್ದರು. ಈ ಮೂಲಕ ಕ್ಷಮಾ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದರು. ಸದ್ಯ ಒಂದು ವರ್ಷ ಸ್ವಯಂ ವಿವಾಹ ಪೂರೈಸಿರುವ ಬಗ್ಗೆ ಕ್ಷಮಾ ಸಂತಸ ವ್ಯಕ್ತಪಡಿಸಿದ್ದಾರೆ.
ಕ್ಷಮಾ ಬಿಂದು ಮೊದಲ ವಿವಾಹ ವರ್ಷದ ವಾರ್ಷಿಕೋತ್ಸವದ ಪೋಸ್ಟ್ ನೋಡಿ, ನೆಟ್ಟಿಗರು ಶುಭಕೋರುತ್ತಿದ್ದಾರೆ. ಇನ್ನೂ ಈಕೆಯ ಡ್ರಾಮಾ ನಿಲ್ಲೋದಿಲ್ಲ ಎಂದು ಹಿಡಿಶಾಪ ಹಾಕ್ತಿದ್ದಾರೆ.