ಮಲ್ಪೆ: ರಾಷ್ಟ್ರೀಯ ಹೆದ್ದಾರಿಯ ಕರಾವಳಿ ಬೈಪಾಸ್‌ನಿಂದ ಮುಂದಕ್ಕೆ ಅಭಿನಂದನ್ ಪೆಟ್ರೋಲ್ ಬಂಕ್ ಸಮೀಪ ಕಳೆದ ಕೆಲವು ಸಮಯಗಳಿಂದ ವಾಹನಗಳನ್ನು ಸರ್ವೀಸ್ ರಸ್ತೆಯಲ್ಲೇ ಪಾರ್ಕ್ ಮಾಡಲಾಗುತ್ತದೆ. ಇದರಿಂದ ಸರ್ವೀಸ್ ರಸ್ತೆಯಲ್ಲಿ ಬರುವ ಇತರ ವಾಹನಗಳ ಸುಗಮ ಸಂಚಾರಕ್ಕೆ ಸಮಸ್ಯೆಯಾಗುತ್ತಿದ್ದರೂ ಸಂಬಂಧಪಟ್ಟ ಇಲಾಖಾಧಿಕಾರಿಗಳು ಇತ್ತ ಗಮನ ಹರಿಸಿಲ್ಲ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ದಿನ ನಿತ್ಯ ಇಲ್ಲಿ ವಾಹನಗಳು ಸಾಲು ಸಾಲಾಗಿ ನಿಲ್ಲುತ್ತವೆ. ರಾಷ್ಟ್ರೀಯ ಹೆದ್ದಾರಿಯಿಂದ ಬಂದ ದಿcಚಕ್ರ ಸಹಿತ ಇನ್ನಿತರ ವಾಹನಗಳು ಸರ್ವೀಸ್ ರಸ್ತೆಗೆ ತಿರುಗುವಾಗ ಸಾಕಷ್ಟು ಅಪಘಾತ ನಡೆಯುತ್ತವೆ. ಮಳೆಗಾಲದಲ್ಲಿ ಸಮಸ್ಯೆ ಜಾಸ್ತಿ ಉದ್ಭವಿಸುತ್ತವೆ. ತತ್‌ಕ್ಷಣ ಇಲ್ಲಿ ವಾಹನಗಳನ್ನು ನಿಲ್ಲಿಸುವುದನ್ನು ನಿಷೇಧಿಸಬೇಕು. ಈ ಬಗ್ಗೆ ಸಂಬಂಧಪಟ್ಟ ಟ್ರಾಫಿಕ್ ಪೊಲೀಸರು ಕ್ರಮ ತೆಗೆದುಕೊಳ್ಳಬೇಕು ಎಂದು ಜನರು ಆಗ್ರಹಿಸಿದ್ದಾರೆ.