ದರ ಕುಸಿತ: ತೆಂಗು ಬೆಳೆಗಾರರು ಕಂಗಾಲು

ಉಡುಪಿ: ಉಭಯ ಜಿಲ್ಲೆಗಳಲ್ಲಿ ಮುಂಗಾರು ಅಲ್ಪ ಪ್ರಮಾಣದಲ್ಲಿ ಆರಂಭವಾಗಿದೆ. ಮಳೆಗಾಲ ಆರಂಭಕ್ಕೂ ಮೊದಲೇ ಬೆಳೆಗಾರರು ತೆಂಗಿನ ಕಾಯಿ ಕೊಯ್ಲು ಮಾಡುವುದು ರೂಢಿ. ಆದರೆ ಈ ಬಾರಿ ಕೊಯ್ಲು ಮುಗಿಸಿದ ಬೆಳೆಗಾರರಿಗೆ ಬೆಲೆ ಕುಸಿತ ಆತಂಕ ಸೃಷ್ಟಿಸಿದೆ.

2022ರ ಎಪ್ರಿಲ್‌ನಲ್ಲಿ ಸಿಪ್ಪೆ ಸಹಿತವಾದ ತೆಂಗಿನ ಕಾಯಿ ಒಂದಕ್ಕೆ ಬೆಳೆಗಾರರಿಂದ 14ರಿಂದ 16 ರೂ. ನೀಡಿ ವ್ಯಾಪಾರಿಗಳು ಖರೀದಿಸಿದ್ದರು. 2023ರ ಮೇ- ಜೂನ್‌ ತಿಂಗಳಲ್ಲಿ ತೆಂಗಿನ ಕಾಯಿ ಬೆಲೆ ಸಾರ್ವ ತ್ರಿಕ ಕುಸಿತ ಎಂಬಂತಾಗಿದೆ. ಸದ್ಯ ಸಿಪ್ಪೆ ಸಹಿತವಾದ ಒಂದು ಕಾಯಿಗೆ 8ರಿಂದ 9 ರೂ. ನೀಡಿ ಕೊಂಡೊಯ್ಯುತ್ತಿದ್ದಾರೆ. ಸಿಪ್ಪೆ ತೆಗೆದ ಕಾಯಿಗೆ (ಕಾಯಿಯ ಗಾತ್ರದ ಆಧಾರ ದಲ್ಲಿ) 12ರಿಂದ 14 ರೂ. ಇದೆ.

ಬಹುಪಾಲು ಬೆಳೆಗಾರರಲ್ಲಿ ತೆಂಗಿನ ಕಾಯಿ ಗಳನ್ನು ಶೇಖರಿಸಿಟ್ಟುಕೊಳ್ಳಲು ಸೂಕ್ತ ವ್ಯವಸ್ಥೆ ಇಲ್ಲ ದ್ದರಿಂದ ಅನಿವಾರ್ಯವಾಗಿ ಕನಿಷ್ಠ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಆದರೆ ಮಾರುಕಟ್ಟೆ ಯಲ್ಲಿ ಗ್ರಾಹಕರು ಖರೀದಿಸುವ ಅದೇ ತೆಂಗಿನ ಕಾಯಿಯ ಬೆಲೆ ಮಾತ್ರ ಕಡಿಮೆಯಾಗಿಲ್ಲ. ಒಂದು ಕೆ.ಜಿ. ಸಿಪ್ಪೆ ತೆಗೆದಿರುವ ತೆಂಗಿನಕಾಯಿಗೆ ಗಾತ್ರದ ಆಧಾರದಲ್ಲಿ 28 ರೂ.ಗಳಿಂದ 35 ರೂ.ಗಳ ವರೆಗೂ ಇದೆ.

ಉಡುಪಿ ಮತ್ತು ದ.ಕ. ಜಿಲ್ಲೆಯಲ್ಲಿ ತೆಂಗಿನ ಕಾಯಿಯನ್ನು ಸಣ್ಣ ಪ್ರಮಾಣದ ಆದಾಯದ ಮೂಲವಾಗಿ ಬೆಳೆಯುವವರೇ ಹೆಚ್ಚು. ವರ್ಷದಲ್ಲಿ ಮೂರರಿಂದ ನಾಲ್ಕು ಕೊçಲು ಮಾಡು ತ್ತಾರೆ. ಮುಂದಿನ ಮೂರ್‍ನಾಲ್ಕು ತಿಂಗಳು ಕೊಯ್ಯು ವವರು ಸಿಗುವುದಿಲ್ಲ ಮತ್ತು ಎಳ ನೀರಿಗೂ ಬೇಡಿಕೆ ಕಡಿಮೆ ಎಂಬ ಕಾರಣಕ್ಕೆ ಮಳೆಗಾಲ ಆರಂಭಕ್ಕೂ ಮುನ್ನ ದೊಡ್ಡ ಮಟ್ಟದ ಕೊçಲು ಸಾಮಾನ್ಯ.

ಖರ್ಚು ಹೆಚ್ಚಿದೆ


ತೆಂಗಿನ ಕೊಯ್ಲು ಸದ್ಯ ದುಬಾರಿಯಾಗಿದೆ. ಒಂದು ಮರ ಏರಲು ವಿಭಿನ್ನ ದರ ಇದೆ. ತೀರಾ ಗ್ರಾಮೀಣ ಭಾಗದಲ್ಲಿ ಒಂದು ಮರಕ್ಕೆ 40ರಿಂದ 50 ರೂ. ಇದ್ದರೆ ನಗರ ಪ್ರದೇಶಕ್ಕೆ ಹೊಂದಿಕೊಂಡಿರುವ ಗ್ರಾ.ಪಂ. ವ್ಯಾಪ್ತಿಯಲ್ಲಿ 60ರಿಂದ 80 ರೂ. ಇದೆ. ಆದ್ದರಿಂದ ಕೊçಲಿಗೆ ಆಗುವ ಖರ್ಚು ಕೆಲವೊಮ್ಮೆ ತೆಂಗಿನ ಕಾಯಿ ಮಾರಾಟದಿಂದ ಬರುವುದಿಲ್ಲ. ಮಳೆಗಾಲ ಹೊರತು ಬೇರೆ ತಿಂಗಳಲ್ಲಿ ದಿನಬಿಟ್ಟು ದಿನ ಅಥವಾ ಮೂರು ದಿನಕ್ಕೆ ಒಮ್ಮೆಯಾದರೂ ಮರಕ್ಕೆ ನೀರು ಹಾಯಿಸಬೇಕು. ಕಟ್ಟೆ ಕಟ್ಟಿ ಗೊಬ್ಬರ ಹಾಕಬೇಕು. ಸಾಕಷ್ಟು ವೆಚ್ಚ ಮಾಡಬೇಕಾಗುತ್ತದೆ. ಆದರೆ ಕೊçಲು ಆದಾಗ ಮಾತ್ರ ದರ ಇರುವುದಿಲ್ಲ ಎಂದು ಬೆಳೆಗಾರರು ಬೇಸರ ವ್ಯಕ್ತಪಡಿಸುತ್ತಾರೆ.

Scroll to Top