ರಶ್ ಅಂತ ಡ್ರೈವರ್ ಸೀಟ್‌ನಲ್ಲಿ ಮಕ್ಕಳ ಜೊತೆ ಬಸ್‌ ಹತ್ತಿದ ಮಹಿಳೆ..!!

ಚಿಕ್ಕಮಗಳೂರು: ಶಕ್ತಿ ಯೋಜನೆ ಜಾರಿ ಹಿನ್ನೆಲೆ ರಾಜ್ಯಾದ್ಯಂತ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರದ್ದೇ ದರ್ಬಾರ್. ವೀಕೆಂಡ್ ಶುರುವಾಗುತ್ತಲೇ ಬಸ್‌ಗಳಲ್ಲಿ ಕಾಲು ಇಡಲು ಸಾಧ್ಯವಾಗದಷ್ಟು ರಶ್. ಬಸ್‌ಗಳಲ್ಲಿ ಫ್ರೀ ಪ್ರಯಾಣ ಅಂತ ಮಹಿಳೆಯರು ಪ್ರವಾಸ, ಧಾರ್ಮಿಕ ಕ್ಷೇತ್ರಗಳಿಗೆ ಸಾಗರೋಪಾದಿಯಲ್ಲಿ ತೆರಳುತ್ತಿದ್ದಾರೆ. ಇಲ್ಲೊಬ್ಬ ಮಹಿಳೆ ಬಸ್ ಫುಲ್ ರಶ್ ಆಯ್ತು ಅಂತ ಡ್ರೈವರ್ ಸೀಟ್ ಮೂಲಕ ಹತ್ತಿರುವ ಘಟನೆ ಶೃಂಗೇರಿಯಲ್ಲಿ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ಬಸ್ ಹತ್ತಲು ಮಹಿಳೆಯರು ಪರದಾಡಿದ್ದಾರೆ. ಬಸ್‌ಗಾಗಿ ನಿಲ್ದಾಣದಲ್ಲಿ ಕಾದು ಕೂತು ಕೊನೆಗೆ ಬಸ್ ಬಂದಾಗ ಹತ್ತಲು ಮುಗಿಬಿದ್ದಿದ್ದಾರೆ. ಈ ವೇಳೆ ಮಹಿಳೆ ಬಸ್‌ನಲ್ಲಿ ಸೀಟ್ ಇಲ್ಲ, ಕಾಲು ಹಾಕಲು ಕೂಡಾ ಜಾಗ ಇಲ್ಲ ಅಂತ ಕೊನೆಗೆ ಡ್ರೈವರ್ ಸೀಟ್‌ನಿಂದಲೇ ಹತ್ತಿದ್ದಾರೆ.

ಮಹಿಳೆ ಮೊದಲು ತನ್ನ ಮಕ್ಕಳನ್ನು ಡ್ರೈವರ್ ಸೀಟ್‌ಗೆ ಹತ್ತಿಸಿ, ಬಳಿಕ ತಾನೂ ಹತ್ತಿ ಅದೇ ಸೀಟ್‌ನಲ್ಲಿ ಕುಳಿತಿದ್ದಾರೆ.

You cannot copy content from Baravanige News

Scroll to Top