ಸಾವಿರಾರು ರೂ. ಖರ್ಚು ಮಾಡಿ ಫೇಶಿಯಲ್ ಮಾಡಿಸಿಕೊಂಡ ಮಹಿಳೆ : ಮನೆಗೆ ಹಿಂತಿರುಗುತ್ತಿದ್ದಂತೆ ಆಗಿದ್ದೇ ಬೇರೆ..!!!

ಮುಂಬೈ: ಮಹಿಳೆಯೊಬ್ಬರು ತನ್ನ ಸೌಂದರ್ಯ ಹೆಚ್ಚಿಸುವ ಸಲುವಾಗಿ ಮುಖಕ್ಕೆ ಮಸಾಜ್ ಮಾಡಿಸಿ ಇದ್ದ ಸೌಂದರ್ಯವನ್ನು ಕಳೆದುಕೊಂಡ ಪ್ರಸಂಗವೊಂದು ಮುನ್ನೆಲೆಗೆ ಬಂದಿದೆ. ಮಸಾಜ್ ಮಾಡಿದ ಬಳಿಕ ಇದ್ದಕ್ಕಿದ್ದಂತೆಯೇ ಮುಖ ಪೂರ್ತಿ ಸುಟ್ಟಗಾಯ, ಬೊಬ್ಬೆಗಳು ಕಾಣಿಸಿಕೊಂಡಿವೆ.

ಅಂಧೇರಿಯಲ್ಲಿ ಈ ಘಟನೆ ಬೆಳಕಿಗೆ ಬಂದಿವೆ. ಜೂನ್ 17ರಂದು ಅಂಧೇರಿಯ ಕಾಮಧೇನು ಶಾಪಿಂಗ್ ಸೆಂಟರ್ಗೆ ಮಹಿಳೆ ತೆರಳುತ್ತಾರೆ. ಅಲ್ಲಿರುವ ಗ್ಲೋ ಲಕ್ಸ್ ಸಲೂನ್ನಲ್ಲಿ ಹೈಡ್ರಾಫೇಶಿಯಲ್ ಚಿಕಿತ್ಸೆ ಮಾಡಿಸುತ್ತಾರೆ. ಮಹಿಳೆ ಇದಕ್ಕಾಗಿ ಬರೋಬ್ಬರಿ 17,500 ರೂಪಾಯಿ ಖರ್ಚು ಮಾಡುತ್ತಾರೆ.

ಅಂದಹಾಗೆಯೇ ಹೈಡ್ರಾಫೇಶಿಯಲ್ ರಿಸರ್ಫೇಸಿಂಗ್ ಚಿಕಿತ್ಸೆ ಆಗಿದ್ದು, ಮುಖದಲ್ಲಿರುವ ಮೊಡವೆ, ರಂಧ್ರಗಳನ್ನು ಸರಿಪಡಿಸುವ ಮೂಲಕ ಹೈಡ್ರೇಟ್ ಮಾಡಲಾಗುತ್ತದೆ. ಸೌಂದರ್ಯಶಾಸ್ತ್ರಜ್ಞರು ಹೈಡ್ರಾಫೇಶಿಯಲ್ ಮಾಡಲು ಪರವಾನಗಿ ಪಡೆದುಕೊಂಡು ಬಳಿಕ ಈ ಚಿಕಿತ್ಸೆ ಮಾಡುತ್ತಾರೆ.

ಅದರಂತೆಯೇ ಮಹಿಳೆ ಕೂಡ ಹೈಡ್ರಾಫೇಶಿಯಲ್ ಮಾಡಲು ಮುಂದಾಗುತ್ತಾಳೆ. ಇದಾಗ ಬಳಿಕ ಮಹಿಳೆಯ ಚರ್ಮ ಸುಟ್ಟಿದೆ. ಗಾಯಗಳು ಕಾಣಿಸಿಕೊಂಡಿವೆ. ಇದರಿಂದ ನೊಂದ ಮಹಿಳೆ ಸ್ಥಳೀಯ ಕಾರ್ಪೋರೇಟರ್ ಠಾಣೆ ಜೊತೆಗೆ ಪೊಲೀಸ್ ಠಾಣೆ ತೆರಳಿ ಎಫ್ಐಆರ್ ದಾಖಲಿಸಿದ್ದಾಳೆ.

You cannot copy content from Baravanige News

Scroll to Top