ಬೆಳ್ತಂಗಡಿ-ಮೂಡಬಿದ್ರೆ ಹೆದ್ದಾರಿ ನಂದಿಬೆಟ್ಟ ಸಮೀಪ ಸರಕಾರಿ ಬಸ್ ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ.
ಪಡ್ಡಂಗಡಿ ಸಮೀಪದ ಓಡೀಲು ನಿವಾಸಿ ದೀಕ್ಷಿತ್ ಮೃತ ಬೈಕ್ ಸವಾರ.
ಇಂದು ದೀಕ್ಷಿತ್ ರವರ ಹುಟ್ಟುಹಬ್ಬವಾಗಿದ್ದರಿಂದ ಬೆಳಿಗ್ಗೆ ವೇಣೂರು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಬರುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ವೇಣೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.