ವಾಷಿಂಗ್ಟನ್: ನರೇಂದ್ರ ಮೋದಿ ಸರ್ಕಾರದ ಮೇಕ್ ಇನ್ ಇಂಡಿಯಾ ಯೋಜನೆಗೆ ಭಾರಿ ಉತ್ತೇಜನ ನೀಡುವಲ್ಲಿ, ಜನರಲ್ ಎಲೆಕ್ಟ್ರಿಕ್ ನ ಏರೋಸ್ಪೇಸ್ ಆರ್ಮ್ ಭಾರತದಲ್ಲಿ ಭಾರತೀಯ ವಾಯುಪಡೆಗಾಗಿ ಫೈಟರ್ ಜೆಟ್ ಎಂಜಿನ್ ಗಳನ್ನು ತಯಾರಿಸಲು ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ನೊಂದಿಗೆ ಕೈಜೋಡಿಸಿದೆ ಎಂದು ಇಂದು ಘೋಷಿಸಿದೆ.
ವಾಷಿಂಗ್ಟನ್ ನಲ್ಲಿ ಜನರಲ್ ಎಲೆಕ್ಟ್ರಿಕ್ ಅಧ್ಯಕ್ಷ ಎಚ್ ಲಾರೆನ್ಸ್ ಕಲ್ಪ್ ಜೂನಿಯರ್ ಅವರನ್ನು ಪ್ರಧಾನಿ ಮೋದಿ ಭೇಟಿಯಾದ ಕೆಲವೇ ಗಂಟೆಗಳ ನಂತರ ಈ ಘೋಷಣೆ ಹೊರಬಿದ್ದಿದೆ.
ಸಭೆಯ ನಂತರ, ಪ್ರಧಾನ ಮಂತ್ರಿ ಕಚೇರಿಯು ಜಿಇ ಮುಖ್ಯಸ್ಥರೊಂದಿಗೆ ಅವರ ಫೋಟೋಗಳನ್ನು ಟ್ವೀಟ್ ಮಾಡಿದೆ. “ಪ್ರಧಾನಿ ಮೋದಿ ಅವರು ಜನರಲ್ ಎಲೆಕ್ಟ್ರಿಕ್ ನ ಸಿಇಓ, ಎಚ್. ಲಾರೆನ್ಸ್ ಕಲ್ಪ್ ಜೂನಿಯರ್ ಅವರೊಂದಿಗೆ ಉತ್ಪಾದಕ ಚರ್ಚೆಗಳನ್ನು ನಡೆಸಿದರು. ಅವರು ಭಾರತದಲ್ಲಿ ಉತ್ಪಾದನೆಯನ್ನು ಉತ್ತೇಜಿಸಲು ಜಿ.ಇ ಯ ಹೆಚ್ಚಿನ ತಂತ್ರಜ್ಞಾನದ ಸಹಯೋಗದ ಕುರಿತು ಚರ್ಚಿಸಿದರು” ಎಂದು ಟ್ವೀಟ್ ಮಾಡಿದೆ.