ಟಿಕೆಟ್ ರಹಿತವಾಗಿ 3636 ಮಂದಿ ಪ್ರಯಾಣ; ಬರೋಬ್ಬರಿ 5,89,453 ರೂ. ದಂಡ ಸಂಗ್ರಹ

ಬೆಂಗಳೂರು, ಜೂ 23: ಕರ್ನಾಟಕ ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ (ಜೂನ್ 11) ಶಕ್ತಿ ಯೋಜನೆ ಜಾರಿಗೆ ಮುನ್ನವೇ ಮೇ ತಿಂಗಳಲ್ಲಿ ಟಿಕೆಟ್ ಇಲ್ಲದೇ ಓಡಾಡಿದ 3 ಸಾವಿರಕ್ಕೂ ಅಧಿಕ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ.

ಈ ಮೂಲಕ ಭೊಕ್ಕಸಕ್ಕೆ ಉಂಟಾಗುತ್ತಿದ್ದ ನಷ್ಟವನ್ನು ಅಧಿಕಾರಿಗಳು ತಪ್ಪಿಸಿದ್ದಾರೆ. ಮೇ ತಿಂಗಳಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತನಿಖಾ ತಂಡಗಳು ತಪಾಸಣಾ ಕಾರ್ಯ ಚುರುಕುಗೊಳಿಸಿದ್ದರು. ಅಧಿಕಾರಿಗಳ ತಂಡ ಆ ತಿಂಗಳಲ್ಲಿ ಒಟ್ಟು 44,052 ಸಾರಿಗೆ ಬಸ್‌ಗಳನ್ನು ತಪಾಸಣೆಗೆ ಒಳಪಡಿಸಿದ್ದಾರೆ.

ಈ ವೇಳೆ ಕೆ.ಎಸ್.ಆರ್.ಟಿ.ಸಿ. ಬಸ್‌ಗಲ್ಲಿ ಟಿಕೆಟ್ ಇಲ್ಲದೇ ಪ್ರಯಾಣ ಮಾಡುತ್ತಿದ್ದ ಒಟ್ಟು ಸುಮಾರು 3266 ಪ್ರಕರಣಗಳಲ್ಲಿ 3636 ಪ್ರಕರಣಗಳು ಟಿಕೆಟ್ ರಹಿತ ಎಂಬುದು ಖಾತರಿಯಾಗಿದೆ. ಅದರಿಂದ ಒಟ್ಟು ನಿಗಮದ ಆದಾಯಕ್ಕೆ ಉಂಟಾಗುತ್ತಿದ್ದ 73,859 ರೂಪಾಯಿ ನಷ್ಟವನ್ನು ಅಧಿಕಾರಿಗಳು ತಪ್ಪಿಸಿದ್ದಾರೆ.

ಟಿಕೆಟ್ ರಹಿತ ಒಟ್ಟು 3636 ಪ್ರಕರಣಗಳಿಂದ ಅಧಿಕಾರಿಗಳು ಒಟ್ಟು 5,89,453 ರೂಪಾಯಿ ಹಣವನ್ನು ಸಂಗ್ರಹಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪ್ರಕಟಣೆ ಮೂಲಕ ತಿಳಿಸಿದೆ. ಇದೊಂದಿಗೆ ಸಾರ್ವಜನಿಕರು, ಪ್ರಯಾಣಿಕರು ಬಸ್‌ಗಳಲ್ಲಿ ಸಂಚರಿಸುವಾಗ ದಯಮಾಡಿ ಟಿಕೆಟ್ ಪಡೆದು ಚಲಾಯಿಸಬೇಕು ಎಂದು ತಿಳಿಸಿದೆ. ಇದು ಪುರುಷರಿಗೆ ಅನ್ವಯವಾಗಲಿದೆ. ಏಕೆಂದರೆ ಜೂನ್ 11ರಂದು ಎಲ್ಲ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆ ಜಾರಿಯಾಗಿದೆ.

You cannot copy content from Baravanige News

Scroll to Top