ಉಳ್ಳಾಲ : ಬಸ್ ಡ್ರೈವರ್ ಅಲ್ಲದೆ ನಿರ್ಲಕ್ಷ್ಯತನದಿಂದ ರಸ್ತೆ ದಾಟಿದ ಮಹಿಳೆ ವಿರುದ್ಧ ಕೇಸು ದಾಖಲು

ಮಂಗಳೂರು : ಉಳ್ಳಾಲ ಖಾಸಗಿ ಬಸ್ ಸಮಯ ಪ್ರಜ್ಞೆಯಿಂದ ಪಾರಾಗಿದ್ದ ಮಹಿಳೆಯ ಮೇಲೂ ಇದೀಗ ಪೊಲೀಸರು ಕೇಸ್ ದಾಖಲಿಸಿದ್ದಾರೆ. ರಸ್ತೆಯನ್ನು ಅಜಾಗರೂಕತೆಯಿಂದ ದಾಟಿದ ಮಹಿಳೆಯನ್ನು ಬಸ್ ಚಾಲಕ ತನ್ನ ಸಮಯ ಪ್ರಜ್ಞೆಯಿಂದ ಪಾರು ಮಾಡಿದ್ದರು. ಈ ಪ್ರಕರಣದಲ್ಲಿ ಬಸ್‌ ಚಾಲಕನ ವಿರುದ್ಧ ಮಾತ್ರವಲದ್ಲೆ ನಿರ್ಲಕ್ಷ್ಯತನದಿಂದ ರಸ್ತೆ ದಾಟಿದ ಮಹಿಳೆ ವಿರುದ್ಧವೂ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ, ದಂಡ ವಸೂಲಿ ಮಾಡಿದ್ದಾರೆ. ಕರ್ನಾಟಕ ಸಂಚಾರ ನಿಯಂತ್ರಣ ನಿಯಮಗಳು 1979ರಡಿ ಮಂಗಳೂರಿನ ಸಂಚಾರಿ ಪೊಲೀಸರು ಕೇಸು ದಾಖಲಿಸಿದ್ದಾರೆ.

ಮಂಗಳೂರು ಹೊರವಲಯದ ತೌಡುಗೋಳಿ ಸಮೀಪದ ನರಿಂಗಾನದಲ್ಲಿ ಮಂಗಳವಾದ ಘಟನೆ ನಡೆದಿತ್ತು. ಪಾದಚಾರಿ ಮಹಿಳೆ ಏಕಾಏಕಿ ರಸ್ತೆ ದಾಟುತ್ತಿದ್ದಾಗ ಬಸ್‌ ಚಾಲಕ ಅಪಘಾತದಿಂದ ಪವಾಡಸದೃಶ ರೀತಿಯಲ್ಲಿ ಪಾರು ಮಾಡಿದ್ದರು. ರಸ್ತೆಯಲ್ಲಿ ಬರುವ ವಾಹನಗಳನ್ನು ಗಮನಿಸದೇ ಮಹಿಳೆ ರಸ್ತೆ ದಾಟಿದ್ದು, ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಸೆಕ್ಷನ್ 13ರ ಸಂಚಾರ ನಿಯಂತ್ರಣ ನಿಯಮಗಳು ಹಾಗೂ ಸೆಕ್ಷನ್ 92ಜಿ ಕೆಪಿ ಕಾಯಿದೆಯಡಿ ಕೇಸು ದಾಖಲಿಸಲು ಅವಕಾಶವಿರುವ ಬಗ್ಗೆ ಖುದ್ದು ಟ್ರಾಫಿಕ್‌ ಎಡಿಜಿಪಿ ಅಲೋಕ್‌ ಕುಮಾರ್‌ ಅವರು ಟ್ವೀಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಹಾಗಾಗಿ ಕರ್ನಾಟಕ ಸಂಚಾರ ನಿಯಂತ್ರಣ ನಿಯಮಗಳು 1979ರಡಿ ಕೇಸು ದಾಖಲಿಸಿದ ಬಗ್ಗೆ ನಗರ ಪೊಲೀಸ್‌ ಕಮಿಷನರ್‌ ಕುಲದೀಪ್‌ ಕುಮಾರ್‌ ಜೈನ್‌ ಮಾಹಿತಿ ನೀಡಿದ್ದಾರೆ.

ಈ ಘಟನೆಯಲ್ಲಿ ನಿರ್ಲಕ್ಷ್ಯ, ಅತೀ ವೇಗದ ಚಲಾವಣೆ ಆರೋಪದಲ್ಲಿ ಬಸ್‌ ಚಾಲಕನ ವಿರುದ್ಧ ಐಪಿಸಿ 279, 336 ಜತೆಗೆ ರೂಲ್‌ 211(2)ಆರ್‌/ಡಬ್ಲೂತ್ರ್ಯ 177 ಮೋಟಾರು ವಾಹನ ಕಾಯಿದ 198ರಂತೆ ಕೇಸು ದಾಖಲಿಸಲಾಗಿತ್ತು. ಈ ಮಧ್ಯೆ ಆ ಖಾಸಗಿ ಬಸ್‌ ಚಾಲಕ ತ್ಯಾಗರಾಜ್‌ನ ಸಮಯಪ್ರಜ್ಞೆ ಸಾಹಸ ಬಗ್ಗೆ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತಗೊಂಡಿತ್ತು.

Scroll to Top