ಶಿರ್ವ, ಜೂ.27: ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಯಾವುದೇ ಸಂಘ ಸಂಸ್ಥೆಗಳು, ಧಾರ್ಮಿಕ ಸಂಸ್ಥೆ ಅಥವಾ ವೈಯುಕ್ತಿಕವಾಗಿ ಯಾವುದೇ ಜಾಹಿರಾತು, ಅಭಿನಂದನೆ, ಶುಭ ಹಾರೈಕೆ ಗಳ ಅಥವಾ ಇತರೇ ಯಾವುದೇ ಬ್ಯಾನರ್, ಕಟೌಟ್, ಬಂಟಿಂಗ್ಸ್, ಪತಾಕೆಗಳನ್ನು ಅಳವಡಿಸಲು ಗ್ರಾಮ ಪಂ ನ ಸಾಮಾನ್ಯ ಸಭೆ 24 ಮೇ 2023ರ ನಿರ್ಣಯ ಸಂಖ್ಯೆ 11(3) ರ ಅನ್ವಯ ಕಡ್ಡಾಯವಾಗಿ ಗ್ರಾಮ ಪಂಚಾಯತ್ ನ ಪರವಾನಿಗೆಯನ್ನು ಪಡೆಯಬೇಕು.
ನಿಗದಿತ ಶುಲ್ಕ ( ಕಟೌಟ್ ರೂ 300, ಬ್ಯಾನರ್ ರೂ 200) ವನ್ನು ನಿಗದಿತ ಅರ್ಜಿಯಲ್ಲಿ ವಿವರವನ್ನು ಭರ್ತಿ ಮಾಡಿ ಪರವಾನಿಗೆಯನ್ನು ಪಡೆಯಬೇಕು.
ಗ್ರಾಮ ಪಂಚಾಯತ್ ಆಸ್ತಿಗಳಾದ ಬಸ್ಸು ನಿಲ್ದಾಣ,ಹೈ ಮಾಸ್ಟ್ ಲೈಟ್ ಕಂಬಗಳು,ಪಂಚಾಯತ್ ತೆರೆದ ಬಾವಿ,ಸರ್ಕಲ್ ಗಳಿಗೆ ಹೊಂದಿಕೊಂಡು ಯಾವುದೇ ಕಟೌಟ್, ಬ್ಯಾನರ್, ಬಂಟಿಂಗ್ಸ್, ಪತಾಕೆಯನ್ನು ಖಡ್ಡಾಯವಾಗಿ ಅಳವಡಿಸುವಂತಿಲ್ಲ. ಈ ಪರವಾನಿಗೆಯ ಅವಧಿಯು ಒಂದು ತಿಂಗಳು ಮಾತ್ರ ಆಗಿರುತ್ತದೆ. ಪರವಾನಿಗೆ ಪಡೆಯದೇ ಅಳವಡಿಸಿದಲ್ಲಿ ಯಾವುದೇ ಮಾಹಿತಿ ನೀಡದೆ ಅದನ್ನು ತೆರವುಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಪರವಾನಿಗೆ ಪಡೆಯದೆ ಅಳವಡಿಸುವ ಯಾವುದೇ ಕಟೌಟ್, ಬ್ಯಾನರ್, ಪತಾಕೆ, ಬಂಟಿಂಗ್ಸ್ ಗಳಿಂದಾಗುವ ಕಷ್ಟ ನಷ್ಟ, ತೊಂದರೆಗಳಿಗೆ ಅಳವಡಿಸಿದ ಸಂಸ್ಥೆ ಅಥವಾ ವ್ಯಕ್ತಿಗಳೇ ಬಾಧ್ಯರಾಗಿರುತ್ತಾರೆ ಎಂದು ಶಿರ್ವ ಗ್ರಾಮ ಪಂಚಾಯತ್ ಪ್ರಕಟಣೆಯಲ್ಲಿ ತಿಳಿಸಿದೆ.