ಸುಳ್ಯ : ಕೋವಿಯಿಂದ ಗುಂಡು ಹೊಡೆದುಕೊಂಡು ಯುವಕ ಮೃತ್ಯು..!!!

ಸುಳ್ಯ : ಕೋವಿಯಿಂದ ಗುಂಡು ಹೊಡೆದುಕೊಂಡು ಯುವಕ ಸಾವನ್ನಪ್ಪಿದ ಘಟನೆ ಉಬರಡ್ಕ ಗ್ರಾಮದ ಬೆಳ್ಳಂಪಾಡಿ ಗುಡ್ಡದಲ್ಲಿ ನಡೆದಿದೆ.

ಅರಂತೋಡು ಗ್ರಾಮದ ರವಿ ಮೃತ ಯುವಕ.

ಈತ ಬೆಳ್ಳಂಪಾಡಿಯ ಮನೆಯೊಂದರಲ್ಲಿ ಸ್ವಲ್ಪ ಸಮಯದಿಂದ ಕೆಲಸಕ್ಕಿದ್ದು ಕುಡಿತದ ಚಟ ಹೊಂದಿದ್ದರೆನ್ನಲಾಗಿದೆ.

ನಿನ್ನೆ ರಾತ್ರಿ ಕೋವಿ ಹಿಡಿದು ಗುಡ್ಡಕ್ಕೆ ಹೋಗಿದ್ದ ರವಿ ಅಲ್ಲಿ ತಲೆಗೆ ಗುಂಡು ಹೊಡೆದು ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.

ಆತ್ಮಹತ್ಯೆ ಆಗಿರಬಹುದೆಂದು ಶಂಕಿಸಲಾಗಿದೆ. ಸ್ಥಳಕ್ಕೆ ರಾತ್ರಿಯೇ ಪೋಲೀಸರು ಬಂದು ಮಹಜರು ನಡೆಸಿರುವುದಾಗಿ ತಿಳಿದುಬಂದಿದೆ.

You cannot copy content from Baravanige News

Scroll to Top