ದ.ಕ, ಉಡುಪಿಯಲ್ಲಿ 10 ದಿನ ಭಾರೀ ಮಳೆ ಸಾಧ್ಯತೆ; ಕೆಎಸ್‌ಎನ್‌ಡಿಎಂಸಿ ಮುನ್ನೆಚ್ಚರಿಕೆ

ಮಂಗಳೂರು/ಉಡುಪಿ, ಜೂ 29: ಮುಂಗಾರು ಬಿರುಸು ಪಡೆದುಕೊಂಡಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮುಂದಿನ 10 ದಿನ ಭಾರೀ ಮಳೆ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಮುನ್ನೆಚ್ಚರಿಕೆ ನೀಡಿದೆ.

ಮಂಗಳೂರು ನಗರದಲ್ಲಿ ಬುಧವಾರ ಬೆಳಗ್ಗೆ ಮಳೆಯಾಗಿದ್ದು, ಮೋಡದಿಂದ ಕೂಡಿದ ವಾತಾವರಣ ಇತ್ತು. ಜಿಲ್ಲೆಯಾದ್ಯಂತ ಬಿಟ್ಟು ಬಿಟ್ಟು ಮಳೆಯಾಗಿದೆ.

ಇನ್ನು ಉಡುಪಿ ಜಿಲ್ಲೆಯಲ್ಲಿ ಬುಧವಾರ ಕೆಲವೆಡೆ ಉತ್ತಮ ಮಳೆಯಾಗಿದ್ದು, ಕಾಪು, ಹೆಬ್ರಿ ಭಾಗದಲ್ಲಿ ಹೆಚ್ಚು ಮಳೆಯಾಗಿದೆ. ಶಂಕರನಾರಾಯಣ, ಕಾಪು, ಬೆಳ್ಮಣ್‌, ಅಜೆಕಾರು, ಕುಂದಾಪುರ, ಪರ್ಕಳ, ಸಿದ್ದಾಪುರ, ಪಡುಬಿದ್ರಿ, ಬೈಂದೂರು, ಮಲ್ಪೆ, ಮಣಿಪಾಲ ಭಾಗದಲ್ಲಿ ಬಿಟ್ಟು ಬಿಟ್ಟು ಮಳೆ ಸುರಿದಿದೆ.

ಜುಲೈ 2ರಿಂದ ಮಳೆ ಮತ್ತಷ್ಟು ಬಿರುಸು ಪಡೆಯುವ ನಿರೀಕ್ಷೆ ಇದ್ದು, ಕರಾವಳಿಯಲ್ಲಿ 40ರಿಂದ 45 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

Scroll to Top