ಪ್ರಧಾನಿ ಮೋದಿ ನಿವಾಸದ ಬಳಿ ಡ್ರೋನ್‌ ಹಾರಾಟ : ಪತ್ತೆ ಕಾರ್ಯ ಚುರುಕು

ನವದೆಹಲಿ : ನವದೆಹಲಿಯಲ್ಲಿರುವ ಪ್ರಧಾನಿ ಮೋದಿ ಅವರ ನಿವಾಸದ ಬಳಿ ಡ್ರೋನ್‌ ಹಾರಾಟವಾಗಿರುವ ಕುರಿತು ವರದಿಯಾಗಿದೆ.

ಪ್ರಧಾನಿ ಅವರ ರಕ್ಷಣೆಗೆ ಇರುವ ವಿಶೇಷ ರಕ್ಷಣಾ ಗುಂಪು ಈ ಡ್ರೋನ್‌ ಹಾರಾಟವನ್ನು ನೋಡಿ ಕೂಡಲೇ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ.

ಎಚ್ಚೆತ್ತ ಪೊಲೀಸರು ಕೂಡಲೇ ತನಿಖೆ ಆರಂಭಿಸಿದ್ದಾರೆ. ಡ್ರೋನ್‌ ಪತ್ತೆ ಕಾರ್ಯವನ್ನು ಆರಂಭಿಸಿರುವ ಪೊಲೀಸರಿಗೆ ಇದುವರೆಗೆ ಯಾವುದೇ ಡ್ರೋನ್‌ ಪತ್ತೆಯಾಗಿಲ್ಲ ಎಂದು ವರದಿ ತಿಳಿಸಿದೆ.

ಪಿಎಂ ಮೋದಿ ಅವರ ನಿವಾಸವು ನೋ ಡ್ರೋನ್ ಝೋನ್ ಅಡಿಯಲ್ಲಿ ಬರುತ್ತದೆ. ಅಂದರೆ ಇಲ್ಲಿ ಯಾವುದೇ ರೀತಿಯ ಹಾರಾಟ ನಡೆಸುವ ಆಗಿಲ್ಲ. ಆದರೂ ಡ್ರೋನ್‌ ಕಾಣಿಸಿಕೊಂಡಿರುವುದು ಆತಂಕ್ಕೀಡು ಮಾಡಿದೆ.

Scroll to Top