ಪ್ರೀತಿಸು ಎಂದು ಪೀಡಿಸುತ್ತಿದ್ದ ಯುವಕ ; ಕಿರುಕುಳದಿಂದ ಬೇಸತ್ತು ಯುವತಿ ಸಾವು

ಮೈಸೂರು: ಯುವಕನೋರ್ವ ತನ್ನನ್ನು ಪ್ರೀತಿಸಲೇಬೇಕು ಎಂದು ಯುವತಿ ಹಿಂದೆ ಬಿದ್ದಿದ್ದ. ಲವ್ ಮಾಡುತ್ತಿಯೋ ಇಲ್ಲವೋ ಎಂದು ಯಾವಾಗಲೂ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತ ಯುವತಿ ಸೂಸೈಡ್ ಮಾಡಿಕೊಂಡಿದ್ದಾಳೆ.

ಹರ್ಷಿತಾ (21) ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಯುವತಿ.

ಮೈಸೂರಿನ ಇಲವಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರೋ ಗಣಗರಹುಂಡಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಅದೇ ಗ್ರಾಮದ ಯುವಕ ಶಿವು (26) ಎಂಬಾತ ಲವ್ ಮಾಡು ಎಂದು ಕಿರುಕುಳ ನೀಡಿದ್ದ. ಹೀಗಾಗಿ ಹರ್ಪಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಪಿಯುಸಿ ಓದಿದ್ದ ಹರ್ಷಿತಾ ಇತ್ತೀಚೆಗಷ್ಟೇ ಕಂಪ್ಯೂಟರ್ ಕ್ಲಾಸ್ಗೆ ಸೇರಿದ್ದಳು. ಶಿವು ಹರ್ಷಿತಾಳ ಹಿಂದೆ ತನ್ನನ್ನು ಪ್ರೀತಿಸುವಂತೆ ದಂಬಾಲು ಬಿದ್ದಿದ್ದ. ಈತನ ಪ್ರಪೋಸಲ್ ಹರ್ಷಿತಾ ತಿರಸ್ಕರಿಸಿದ್ದಳು.

ಇನ್ನು, ಇದರ ಮಧ್ಯೆ ಹರ್ಷಿತಾಗೆ ಮದುವೆ ಫಿಕ್ಸ್ ಆಗಿತ್ತು. ಈ ವಿಷಯ ತಿಳಿದ ಶಿವು ತನ್ನನ್ನ ಮದುವೆ ಆಗು ಎಂದು ಪೀಡಿಸಿದ್ದಾನೆ. ಇದರಿಂದ ಬೇಸತ್ತ ಹರ್ಷಿತಾ ಮಾತ್ರೆ ಕುಡಿದು ಪ್ರಾಣ ಬಿಟ್ಟಿದ್ದಾಳೆ. ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಹರ್ಷಿತಾ ಕಣ್ಣು ಮುಚ್ಚಿದ್ದಾಳೆ.

ಈಗ ಮಗಳ ಸಾವಿಗೆ ಶಿವು ಕಾರಣ ಎಂದು ಹರ್ಷಿತಾ ತಂದೆ ವೇಣುಗೋಪಾಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಶಿವು ಬಂಧನಕ್ಕೆ ಇಲವಾಲ ಪೊಲೀಸರು ಬಲೆ ಬೀಸಿದ್ದಾರೆ.

You cannot copy content from Baravanige News

Scroll to Top