ಟ್ವಿಟರ್ ಗೆ ಠಕ್ಕರ್; ಮೆಟಾದಿಂದ ಹೊಸ ಆ್ಯಪ್ ಬಿಡುಗಡೆ

ವಾಷಿಂಗ್ಟನ್, ಜು.5: ಸಾಲು ಸಾಲು ಷರತ್ತು ವಿಧಿಸಿ ಬಳಕೆದಾರರಿಗೆ ಕಿರಿಕಿರಿಯುಂಟು ಮಾಡುತ್ತಿರುವ ಮೈಕ್ರೋಬ್ಲಾಗಿಂಗ್ ವೇದಿಕೆ ‘ಟ್ವಿಟರ್’​ಗೆ ಪ್ರತಿಸ್ಪರ್ಧಿಯಾಗಿ ಮೆಟಾ ಕಂಪನಿ “ಥ್ರೆಡ್ಸ್​” ಆ್ಯಪ್ ಬಿಡುಗಡೆ ಮಾಡಲು ಸಿದ್ದತೆ ನಡೆಸಿದೆ.

ಇದು ಟ್ವಿಟ್ಟರ್‌ಗೆ ಪರ್ಯಾಯವಾದ ಹೊಸ ಆ್ಯಪ್‌ ಎನ್ನಲಾಗುತ್ತಿದೆ. ಥ್ರೆಡ್ಸ್‌ ಅನ್ನು ಬಳಕೆದಾರರು ‌ಇನ್​ಸ್ಟಾಗ್ರಾಮ್ ಅಕೌಂಟ್​ಗೆ ಲಿಂಕ್ ಮಾಡುವ ಮೂಲಕ ಈ ನೂತನ ಆ್ಯಪ್ ನ್ನು ಬಳಕೆ ಮಾಡಬಹುದು.

ಥ್ರೆಡ್ಸ್​ ಜುಲೈ 6ರಂದು ಲಭ್ಯವಾಗುವ ನಿರೀಕ್ಷೆ ಇದ್ದು ಟ್ವಿಟ್ಟರ್ ಮಾದರಿಯಲ್ಲೇ ಇರಲಿದೆ ಎನ್ನಲಾಗಿದೆ. ಬಳಕೆದಾರರು ನೋಡಬಹುದಾದ ಪೋಸ್ಟ್‌ಗಳ ಸಂಖ್ಯೆಯನ್ನೂ ಟ್ವಿಟ್ಟರ್‌ ತಾತ್ಕಾಲಿಕವಾಗಿ ಸೀಮಿತಗೊಳಿಸಲು ಪ್ರಾರಂಭಿಸಿದ್ದು ಇದು ಬಳಕೆದಾರರಿಗೆ ತೀವ್ರ ಕಿರಿಕಿರಿಯುಂಟು ಮಾಡಿದೆ.

ಈ ಆ್ಯಪ್ ಮೊದಲಿಗೆ ಆ್ಯಪಲ್ ಸ್ಟೋರ್ ನಲ್ಲಿ ಲಭ್ಯವಾಗಲಿದ್ದು ಆದರೆ, ಗೂಗಲ್ ಪ್ಲೇ ಸ್ಟೋರ್ ನಲ್ಲಿ ಈ ಆ್ಯಪ್ ಬಗ್ಗೆ ಯಾವುದೇ ಮಾಹಿತಿಯಿಲ್ಲ.

You cannot copy content from Baravanige News

Scroll to Top