ಇನ್ಸ್ಟಾದಲ್ಲಿ ಧೂಳೆಬ್ಬಿಸಿದ ಧೋನಿ : ಮಿಲಿಯನ್ ಗಟ್ಟಲೇ ವೀಕ್ಷಣೆ ಪಡೆದ ಮಾಹಿ ಬರ್ತ್ಡೇ ವೀಡಿಯೋ

ಎಂಎಸ್ ಧೋನಿಯನ್ನ ಕ್ರೇಜ್ ಕಾ ಬಾಪ್ ಅಂತ ಸುಮ್ಮನೇ ಕರೆಯಲ್ಲ. ಅವರು ಕಾಲಿಟ್ಟಕಡೆ ಎಲ್ಲ ಸುನಾಮಿ ಏಳುತ್ತೆ. ಈಗ ಅಂತಹದ್ದೇ ಒಂದು ಸುನಾಮಿ ಇನ್ಸ್ಟಾಗ್ರಾಮ್ನಲ್ಲಿ ಎದ್ದಿದೆ. ಆ ಸುನಾಮಿ ಏನು ಎಂದರೇ.

ಎಂಎಸ್ ಧೋನಿ ಈ ಮಾನ್ಸ್ಟರ್ ಬ್ಯಾಟ್ ಹಿಡಿದು ಅಂಗಳಕ್ಕಿಳಿದ್ರೆ ಸಾಕು ಸೋಷಿಯಲ್ ಮೀಡಿಯಾ ಪೂರ್ತಿ ಆವರಿಸಿ ಬಿಡ್ತಾರೆ. ಆದ್ರೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿ ಜಪ ನಡೆದ್ರೂ ಅವರೆಂದು ಇದರ ಗೀಳು ಹಚ್ಚಿಕೊಂಡವರಲ್ಲ. ಸೋಷಿಯಲ್ ಮೀಡಿಯಾ, ಮಿಸ್ಟರ್ ಕೂಲ್ ಸಂಬಂಧ ಅಷ್ಟಕಷ್ಟೇ.



ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆಕ್ಟೀವ್ ಅಲ್ಲದ ಧೋನಿ 6 ತಿಂಗಳಿಗೋ, ವರ್ಷಕ್ಕೆ ಒಮ್ಮೆ ಪೋಸ್ಟ್ ಮಾಡ್ತಾರೆ. ಆದ್ರೆ ಮಾಹಿ ಯಾವಾಗೇ ಆಗಲಿ ಪೋಸ್ಟ್ ಮಾಡಿದ್ರು ಸೋಷಿಯಲ್ ಮೀಡಿಯಾದಲ್ಲಿ ಸುನಾಮಿನೇ ಹೇಳುತ್ತೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ನಿನ್ನೆ ಧೋನಿ ಮಾಡಿದ ಒಂದು ಸಣ್ಣ ವಿಡಿಯೋ ಪೋಸ್ಟ್.

ಶ್ವಾನಗಳ ಜೊತೆ ಕೇಕ್ಕಟ್ ಮಾಡಿ ಬರ್ತ್ಡೇ ಸೆಲಬ್ರೇಟ್

ಇದೇ, ಇದೇ ಬರ್ತ್ಡೇ ವಿಡಿಯೋ ಸದ್ಯ ಇನ್ಸ್ಟಾಗ್ರಾಮ್ನಲ್ಲಿ ಸುನಾಮಿ ಎಬ್ಬಿಸಿದೆ. ಗುರುವಾರ ಮಹೇಂದ್ರ ಸಿಂಗ್ ಧೋನಿ 41 ಕಳೆದು, 42ನೇ ವರ್ಷಕ್ಕೆ ಕಾಲಿರಿಸಿದ್ರು. ಅಭಿಮಾನಿಗಳ ಭಕ್ತ ವರ್ಗ ಮಾಹಿಯನ್ನ ಬರ್ತ್ಡೇಯನ್ನ ಬಹಳ ಸಡಗರದಿಂದ ಆಚರಿಸಿದ್ರು. ಅತ್ತ ಬಾಸ್ ಧೋನಿ ರಾಂಚಿಯಲ್ಲಿರುವ ತಮ್ಮ ಫಾರ್ಮ್ಹೌಸ್ನಲ್ಲಿ ಶ್ವಾನಗಳ ಜೊತೆ ಕೇಕ್ಕಟ್ ಮಾಡಿ ಬರ್ತ್ಡೇ ಸೆಲಬ್ರೇಟ್ ಮಾಡಿದ್ರು.

ಮಾಹಿ ಮಾಡಿದ ಒಂದು ವಿಡಿಯೋ ಕೆಲವೇ ಗಂಟೆಗಳಲ್ಲಿ ಮಿಲಿಯನ್ ಗಟ್ಟಲೇ ವೀವ್ಸ್ ಪಡೆದುಕೊಂಡಿದೆ. ದಿ ಲೆಜೆಡ್ ಧೋನಿ ಪೊಸ್ಟ್ ಹಾಕಿದ್ದೇ ತಡ ನೆಟ್ಟಿಗರು ವಿಡಿಯೋವನ್ನ ನೋಡಿ ಸಖತ್ ಎಂಜಾಯ್ ಮಾಡ್ತಿದ್ದಾರೆ.

1 ಗಂಟೆಯಲ್ಲಿ 3 ಲಕ್ಷದ 36 ಸಾವಿರ ಮಂದಿ ವೀಕ್ಷಣೆ..!

ಇನ್ಸ್ಟಾದಲ್ಲಿ ಧೋನಿ ಬರ್ತ್ಡೇಯ ವಿಡಿಯೋ ಪೋಸ್ಟ್ ಹಾಕಿದ್ದೇ ತಡ ವೀಕ್ಷಣೆಯಲ್ಲಿ ದಾಖಲೆ ಬರೆದಿದೆ. ಪೋಸ್ಟ್ ಆದ ಒಂದೇ ಗಂಟೆಯಲ್ಲಿ ಬರೋಬ್ಬರಿ 3 ಲಕ್ಷದ 62 ಸಾವಿರದ 195 ಮಂದಿ ವೀಕ್ಷಿಸಿದ್ದಾರೆ. ಈ ಪೈಕಿ ಎರಡೂವರೆ ಲಕ್ಷ ಜನ ವಿಡಿಯೋ ಮೆಚ್ಚಿ ಕಾಮೆಂಟ್ ಮಾಡಿದ್ದಾರೆ.



ಬರೋಬ್ಬರಿ 6 ತಿಂಗಳ ಬಳಿಕ ಇನ್ಸ್ಟ್ರಾಮ್ಗೆ ಕಮ್ಬ್ಯಾಕ್

ಸದ್ಯ ಇನ್ಸ್ಟಾದಲ್ಲಿ ಧೋನಿ ವಿಡಿಯೋ ನೋಡೋದಂದ್ರೆ ಮರುಭೂಮಿಯಲ್ಲಿ ಓಯಸಿಸ್ ನೋಡಿದ ಹಾಗೇ. ಯಾಕಂದ್ರೆ ಬಹಳ ಅಪರೂಪಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ ಹಾಕ್ತಾರೆ. ನಿನ್ನೆಯ ಬರ್ತ್ಡೇ ವಿಡಿಯೊ ಬಿಟ್ರೆ ಕೊನೆ ಬಾರಿ ಪೋಸ್ಟ್ ಹಾಕಿದ್ದು ಬರೋಬ್ಬರಿ 6 ತಿಂಗಳ ಹಿಂದೆ. ಟ್ರ್ಯಾಕ್ಟರ್ನಲ್ಲಿ ಕೂತು ಭೂಮಿ ಉಳುಮೆ ಮಾಡುವ ವಿಡಿಯೋವನ್ನ ಶೇರ್ ಮಾಡಿದ್ರು. ಇದು ಕೂಡ ವೀವ್ಸ್ನಲ್ಲಿ ಧೂಳೆಬ್ಬಿಸಿತ್ತು.

ಧೋನಿ ಬರೋವವರೆಗೂ ಮಾತ್ರ ಬೇರೆಯವರ ಹವಾ, ಬಂದ್ಮೇಲೆ ಅವರದ್ದೇ ಹವಾ ಅನ್ನೋದಕ್ಕೆ ಬರ್ತ್ಡೇ ವಿಡಿಯೋ ಪೋಸ್ಟ್ ಬೆಸ್ಟ್ ಎಕ್ಸಾಂಪಲ್. ಈ ಕ್ರೇಜ್ ಕಾ ಬಾಪ್ ಮತ್ತೆ ಅದ್ಯಾವಾಗ ಪೋಸ್ಟ್ ಹಾಕ್ತಾರೋ ಗೊತ್ತಿಲ್ಲ.

Scroll to Top