ಉಡುಪಿ: ಸರ್ಕಾರಿ ಗ್ಯಾರಂಟಿಗಳ ಮಾದರಿಯಲ್ಲಿ ಉಚಿತ ಮದ್ಯ ನೀಡುವಂತೆ ಸರಕಾರಕ್ಕೆ ಆಗ್ರಹಿಸಿದ ಕೂಲಿ ಕಾರ್ಮಿಕರು ವಿಭಿನ್ನವಾಗಿ ಪ್ರತಿಭಟನೆ ನಡೆಸಿದ ಘಟನೆ ಉಡುಪಿ ಜಿಲ್ಲೆಯ ಚಿತ್ತರಂಜನ್ ಸರ್ಕಲ್ ನಲ್ಲಿ ನಡೆದಿದೆ.
ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ನಿತ್ಯಾನಂದ ಒಳಕಾಡು ನೇತೃತ್ವದ ಈ ಪ್ರತಿಭಟನೆಯಲ್ಲಿ ಕುಡುಕರಿಗೆ ಹಾರ ಹಾಕಿ ಸನ್ಮಾನ, ಆರತಿ ಎತ್ತಿ ಗೌರವಿಸಲಾಯಿತು.
ಸರ್ಕಾರ ಬಡವರಿಗಾಗಿ ಉಚಿತ ಗ್ಯಾರಂಟಿಗಳ ಯೋಜನೆಗಳನ್ನು ಜಾರಿಗೊಳಿಸಿದೆ ಆದ್ರೆ ಬಡ ಶ್ರಮಜೀವಿಗಳು ಕುಡಿಯುವ ಮದ್ಯದ ದೃ ಭಾರಿ ಏರಿಕೆ ಮಾಡಿದೆ ಇಧು ಖಂಡನೀಯವಾಗಿದೆ ಎಂದು ಮದ್ಯಪ್ರಿಯರು ಆರೋಪಿಸಿದ್ದಾರೆ.
ಇತ್ತೀಚಿನ ಬಜೆಟ್ ನಲ್ಲಿ ಮದ್ಯದ ಬೆಲೆ 20 ಶೇಕಡವನ್ನು ಸರಕಾರ ಏರಿಕೆ ಮಾಡಿದ್ದು, ಸರಕಾರದ ಉಚಿತ ಯೋಜನೆಗೆ ಹಣ ನಮ್ಮಿಂದಲೇ ಬರುವುದು.
ನಮಗೆ ಮದ್ಯದ ಬೆಲೆ ಇಳಿಕೆ ಮಾಡಿ. ಇಲ್ಲದಿದ್ದಲ್ಲಿ ಬೆಳಿಗ್ಗೆ ನೈಂಟಿ, ಸಂಜೆ ನೈಂಟಿ ಉಚಿತವಾಗಿ ನೀಡಿ.
ಇಲ್ಲದಿದ್ದಲ್ಲಿ ಸಾರಾಯಿಯನ್ನು ಬಂದ್ ಮಾಡಿ. ಆ ಹಣವನ್ನು ನಾವು ನಮ್ಮ ಹೆಂಡತಿ, ಮಕ್ಕಳಿಗೆ ನಿಡುತ್ತೇವೆ.
ನಮ್ಮ ಹೆಂಡತಿ, ಮಕ್ಕಳನ್ನು ನಾವೇ ಹಣ ಕೊಟ್ಟು ದೇವಸ್ಥಾನಗಳಿಗೆ ಕರೆದುಕೊಂಡು ಹೋಗುತ್ತೆವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.