ಉಡುಪಿ : ರಾಹುಲ್ ಗಾಂಧಿ ಯನ್ನು ದೋಷಿಯನ್ನಾಗಿಸಿ ಲೋಕಸಭೆಯಿಂದ ಅನರ್ಹಗೊಳಿಸಿರುವ ಸೇಡಿನ ಕ್ರಮವನ್ನು ವಿರೋಧಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಮೌನ ಪ್ರತಿಭಟನೆ ನಡೆಯಿತು.
ಉಡುಪಿಯ ಅಜ್ಜರಕಾಡು ಗಾಂಧಿ ಪ್ರತಿಮೆ ಎದುರು ಮೌನ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಕೈಯಲ್ಲಿ ಕೇಂದ್ರ ಸರಕಾರ ವಿರುದ್ದ ಭಿತ್ತಿ ಪತ್ರ ಹಿಡಿದಿದ್ದರು.
ಬಿಜೆಪಿ ನಡೆಸುತ್ತಿರುವುದು ಕುಟಿಲ ರಾಜಕಾರಣ, ರಾಹುಲ್ ಗಾಂಧಿಯವರ ನಿರ್ಭೀತ ಮತ್ತು ರಾಜಿರಹಿತ ಹೋರಾಟವನ್ನು ಬೆಂಬಲಿಸುತ್ತೇವೆ ಎಂದ ಪ್ರತಿಭಟನಾಕಾರರು ಘೋಷಿಸಿದರು.
ರಾಹುಲ್ ಗಾಂಧಿ ದೇಶಕ್ಕಾಗಿ ಯಾವ ತ್ಯಾಗಕ್ಕೂ ಸಿದ್ಧ ಎಂದು ಹೇಳಿದ್ದಾರೆ ಅವರಿಗೆ ನೀಡಿದ ಶಿಕ್ಷೆಯನ್ನು ಕಾಂಗ್ರೆಸ್ ಪಕ್ಷ ಮಾತ್ರವಲ್ಲ ಇಡೀ ರಾಷ್ಟ್ರವೇ ಖಂಡಿಸುತ್ತಿದೆ ಎಂದು ಪ್ರತಿಭಟನಾಥರು ತಿಳಿಸಿದರು. ಈ ಬೆಳವಣಿಗೆಗಳನ್ನು ಖಂಡಿಸಿ ಅಜ್ಜರಕಾಡು ಗಾಂಧಿ ಪ್ರತಿಮೆ ಎದುರು ಇಡೀ ದಿನ ಮೌನ ಸತ್ಯಾಗ್ರಹ ನಡೆಸಿದರು.