ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಅಭಿನಂದಿಸಿ ಯೋಜನೆಗಳನ್ನು ಶ್ಲಾಘಿಸಿದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಪತ್ರವೊಂದನ್ನು ಬರೆದು ದಾಖಲೆಯ 14ನೇ ಬಜೆಟ್ ಮಂಡಿಸಿದ ಹಿನ್ನೆಲೆಯಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ ಮತ್ತು ಜೈನ ಸಮದಾಯಕ್ಕೆ ವಿಶೇಶ ಅನುದಾನ ನೀಡಿರುವುದಕ್ಕೆ ಸಂತಸ ವ್ಯಕ್ತಪಡಿಸಿ ಧನ್ಯವಾದ ತಿಳಿಸಿದ್ದಾರೆ.

ಬಜೆಟ್ ನಲ್ಲಿ ಕಾರ್ಯ್ರಮಗಳನ್ನು ಶ್ಲಾಘಿಸಿರುವ ಧರ್ಮಾಧಿಕಾರಿ, ಶಕ್ತಿ ಯೋಜನೆಯನ್ನು ವಿಶೇಷವಾಗಿ ಕೊಂಡಾಡಿದ್ದಾರೆ. ಧರ್ಮಸ್ಥಳಕ್ಕೆ ಭೇಟಿ ನೀಡುತ್ತಿರುವ ಮಹಿಳೆಯರು ಸಿದ್ದರಾಮಯ್ಯ ಹೆಸರಲ್ಲಿ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಮತ್ತು ಕಾಣಿಕೆ ಸಲ್ಲಿಸುತ್ತಿರುವರೆಂದು ವೀರೇಂದ್ರ ಹೆಗ್ಗಡೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮುಖ್ಯಮಂತ್ರಿಗಳಿಗೆ ಬಿಡುವಾದಾಗ ಮಂಜುನಾಥನ ದರ್ಶನ ಪಡೆದುಕೊಂಡು ಹೋಗುವಂತೆ ಧರ್ಮಾಧಿಕಾರಿ ಹೇಳಿದ್ದಾರೆ.

You cannot copy content from Baravanige News

Scroll to Top