ಮೊಬೈಲ್ ಫೋನ್ಗಳು ದೈನಂದಿನ ಬಳಕೆಯ ಸಾಧನವಾಗಿದ್ದು, ಕೈಗೆಟಕುವ ಅಂತರ್ಜಾಲದಿಂದ ಪ್ರಪಂಚಕ್ಕೆ ನಮ್ಮನ್ನು ಸಂಪರ್ಕಿಸುವ ಒಂದು ಅಗತ್ಯ ಮಾರ್ಗವಾಗಿದೆ. ಆನ್ಲೈನ್ ಶಾಪಿಂಗ್ನಿಂದ ಹಿಡಿದು ಬ್ಯಾಂಕಿಂಗ್ ಸೇರಿ ಹಲವು ಕಾರ್ಯಗಳು ಈಗ ಸ್ಮಾರ್ಟ್ಫೋನ್ನಿಂದ ಆಗುತ್ತಿವೆ.. ಅದೇ ರೀತಿ ಕೆಲವೇ ಕ್ಷಣಗಳಲ್ಲಿ ಲೋನ್ ಕೊಡ್ತೀವಿ ಅಂತ ತುರ್ತು ಸಾಲ ಕೊಡುವ ಆನ್ಲೈನ್ ಆ್ಯಪ್ಗಳ ಕಿರುಕುಳ ಮಿತಿಮೀರಿ ಹೋಗಿದೆ.
ಮಿತಿ ಮೀರಿದ ಆನ್ಲೈನ್ ಲೋನ್ ಆ್ಯಪ್ಗಳ ಕಿರುಕುಳ!
ಮೊನ್ನೆ ಬೆಂಗಳೂರಿನಲ್ಲಿ ಚೀನಾ ಆ್ಯಪ್ ಲೋನ್ನಿಂದ ಸಾಲ ಪಡೆದಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ಇವರ ಕಿರುಕುಳ ತಾಳಲಾರದೇ ಆತ್ಮಹತ್ಯೆಗೆ ಶರಣಾಗಿದ್ದ. ಈ ಸುದ್ದಿ ಹಸಿರಾಗಿರುವಾಗಲೇ ಲೋನ್ ಆ್ಯಪ್ಗಳ ಉಪಟಳ ಕಥೆಗಳು ಮುಂದುವರಿದಿವೆ. ತುರ್ತು ಸಾಲ ಪಡೆದು ಕಟ್ಟದವರಿಗೆ ಕರೆ ಮಾಡಿ ಕಿರುಕುಳ ನೀಡ್ತಿದ್ದಾರೆ ಲೋನ್ ಆ್ಯಪ್ ಸಿಬ್ಬಂದಿ.
ಆನ್ಲೈನ್ ಆ್ಯಪ್ ಲೋನ್ ಕಾಟದಿಂದ ಬೇಸತ್ತ ಗೃಹಿಣಿ!
ತುಮಕೂರಿನ ಮಂಜುನಾಥನಗರ ನಿವಾಸಿ ಶಾಂತಲಾ ಎಂಬುವರು ಆನ್ಲೈನ್ ಲೋನ್ ಸಿಬ್ಬಂದಿ ಕಾಟಕ್ಕೆ ಬೇಸತ್ತಿದ್ದಾರೆ. ಪತಿ ಮೃತಪಟ್ಟಿದ್ದರೂ ಶಾಂತಲಾಗೆ ಫೋನ್ ಮಾಡಿ ಟಾರ್ಚರ್ ಮಾಡಿದ್ದಾರೆ. ಲೋನ್ ಕಟ್ಟದಿದ್ರೆ ಪೊಲೀಸರು ಮನೆಗೆ ಬರೋದಾಗಿ ಬೆದರಿಕೆ ಹಾಕಿದ್ದಾರೆ..
ಟಾರ್ಚರ್ ‘ಆ್ಯಪ್’
ಕಳೆದ ಏ.29ರಂದು ಮೃತಪಟ್ಟಿದ್ದ ಹೃದಯಾಘಾತದಿಂದ ಶಾಂತಲಾ ಪತಿ ರಾಜೇಂದ್ರಸ್ವಾಮಿ ಮೃತಪಟ್ಟಿದ್ದರು. ಸ್ನೇಹಿತರಿಗೆ ಲೋನ್ ಆ್ಯಪ್ನಲ್ಲಿ ರಾಜೇಂದ್ರಸ್ವಾಮಿ ಶ್ಯೂರಿಟಿ ಹಾಕಿದ್ದರು. 4 ದಿನಗಳ ಹಿಂದೆ ಶಾಂತಲಾಗೆ ನಿರಂತರವಾಗಿ ಕರೆ ಮಾಡಿ ಹಣ ಕಟ್ಟುವಂತೆ ಕಿರುಕುಳ, 80 ಸಾವಿರ ಲೋನ್ ಕಟ್ಟುವಂತೆ ಶಾಂತಲಾಗೆ ಸಿಬ್ಬಂದಿ ಕಿರುಕುಳ ನೀಡಿದ್ದಾರೆ. ನನ್ನ ಪತಿ ಬದುಕಿಲ್ಲ ಅಂದ್ರೂ ನೀವೇ ಕಟ್ಟಿ ಅಂತ ಟಾರ್ಚರ್ ನೀಡಿದ್ದಾರೆ.
ಲೋನ್ ಆ್ಯಪ್ನ ಕರಾಳ ಚರಿತ್ರೆ ಒಂದೊಂದೇ ಬಯಲಾಗುತ್ತಿದೆ. ತುರ್ತು ಅಗತ್ಯಕ್ಕಾಗಿ ಖಾಸಗಿ ಆ್ಯಪ್ಗಳ ಮೂಲಕ ಸಾಲ ಪಡೆಯುವ ಮುನ್ನ ಒಮ್ಮೆ ಯೋಚಿಸುವುದು ಉತ್ತಮ. ಸರ್ಕಾರ ಆನ್ಲೈನ್ ವಂಚಕರಿಗೆ ಕಡಿವಾಣ ಹಾಕಬೇಕಾದ ಅನಿವಾರ್ಯತೆ ಇದೆ.