ಬಂಟಕಲ್ಲು: ನಾಗರಿಕ ಸೇವಾ ಸಮಿತಿ (ರಿ) ಬಂಟಕಲ್ಲು ಇವರ ಆಶ್ರಯದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ರಕ್ತ ನಿಧಿ ಕೆ ಎಂ ಸಿ ಆಸ್ಪತ್ರೆ ಮಣಿಪಾಲ ಇವರ ಸಹಕಾರದೊಂದಿಗೆ ನೆತ್ತರ ನೆರವು(ಬೃಹತ್ ಸ್ವಯಂ ಪ್ರೇರಿತ ರಕ್ತದಾನ ಶಿಬಿರ) ಸೆ. 25ರಂದು ಬೆಳಿಗ್ಗೆ 9 ರಿಂದ 12.30 ತನಕ ರೋಟರಿ ಸಭಾಭವನ ಬಂಟಕಲ್ಲುವಿನಲ್ಲಿ ನಡೆಯಲಿದೆ.
ಈ ನಿಮಿತ್ತ ರಕ್ತದಾನ ಮಾಡಿದವರಿಗೆ ಪ್ರಮಾಣ ಪತ್ರದೊಂದಿಗೆ ತಾನಿಷ್ಕ್ ಅವರ ಒಂದು ಬ್ಯಾಗ್, ಆಕರ್ಷಕ ಕಿಟ್, ಉಪಾಹಾರ ನೀಡಲಾಗುವುದು, ರಕ್ತದಾನದ ಮೊದಲು ರಕ್ತದೊತ್ತಡ, ಮಧುಮೇಹ ಪರೀಕ್ಷೆ ನಡೆಸಲಾಗುವುದು ಎಂದು ಅಧ್ಯಕ್ಷ ಕೆ ಆರ್ ಪಾಟ್ಕರ್, ಕಾರ್ಯದರ್ಶಿ ದಿನೇಶ್ ದೇವಾಡಿಗ, ಕೋಶಾಧಿಕಾರಿ ಜಗದೀಶ್ ಆಚಾರ್ ಹಾಗೂ ನಾಗರಿಕ ಸೇವಾ ಸಮಿತಿಯ ಸರ್ವ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.