ಮೊಬೈಲ್ ನೋಡ್ಕೊಂಡು ಡ್ರೈವಿಂಗ್‌ : ಚಾಲಕನ ಮೇಲೆ ಬಿತ್ತು ಕೇಸ್‌ ; ಡ್ರೈವಿಂಗ್‌ ಲೈಸೆನ್ಸ್‌ ಕ್ಯಾನ್ಸಲ್‌..!!

ಮಂಗಳೂರು : ಒಂದು ಕೈಲಿ ಮೊಬೈಲ್ ನೋಡ್ಕೊಂಡು ಇನ್ನೊಂದು ಕೈಯಲ್ಲಿ ಸ್ಟೇರಿಂಗ್ ತಿರುಗಿಸುತ್ತ ಬಸ್ಸು ಓಡಿಸುತ್ತಿದ್ದ ಚಾಲಕನ ವಿರುದ್ಧ ಮಂಗಳೂರು ನಗರ ಪೊಲೀಸರು ಕೇಸು ದಾಖಲಿಸಿದ್ದು, ಜೊತೆಗೆ ಆತನ ಲೈಸನ್ಸ್‌ ರದ್ದುಗೊಳಿಸಲು ಆರ್‌ಟಿಒಗೆ ಮನವಿ ಮಾಡಲಾಗಿದೆ ಎಂದು ಮಂಗಳೂರು ನಗರ ಪೊಲೀಸ್‌ ಆಯುಕ್ತ ಕುಲ್‌ದೀಪ್‌ ಆರ್‌ ಜೈನ್‌ ಅವರು ತಿಳಿಸಿದ್ದಾರೆ.



ಮಂಗಳೂರಿನಿಂದ ತಲಪಾಡಿ ನಡುವೆ ಓಡಾಟ ನಡೆಸುವ 42 ರೂಟ್ ಸಂಖ್ಯೆಯ ಖಾಸಗಿ ಸಿಟಿ ಬಸ್ಸಿನ ಚಾಲಕ ನಿರ್ಲಕ್ಷ್ಯದಿಂದ ಬಸ್ಸು ಚಲಾಯಿಸಿದ್ದಾನೆ. ಈ ವೇಳೆ ಪ್ರಯಾಣಿಕರೊಬ್ಬರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವೀಡಿಯೋ ವೈರಲ್‌ ಆಗುತ್ತಿದ್ದಂತೆ ಎಚ್ಚೆತ್ತ ಮಂಗಳೂರು ನಗರ ಸಂಚಾರಿ ಪೊಲೀಸರು ಬಸ್‌ ಚಾಲಕನ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡ ಪೊಲೀಸ್‌ ಆಯುಕ್ತ “ನಿರ್ಲಕ್ಷ್ಯತನದಿಂದ ಚಾಲನೆ ಮಾಡುತ್ತಿದ್ದ ಚಾಲಕನ ವಿರುದ್ಧ ಮಂಗಳೂರು ನಗರ ಪೊಲೀಸರು ಕೇಸು ದಾಖಲಿಸಿದ್ದು, ಜೊತೆಗೆ ಆತನ ಲೈಸನ್ಸ್‌ ರದ್ದುಗೊಳಿಸಲು ಆರ್‌ಟಿಒಗೆ ಮನವಿ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.

Scroll to Top