ಕಟಪಾಡಿ ಶಿರ್ವ ರಾಜ್ಯ ಹೆದ್ದಾರಿ ಸುಭಾಷ್ ನಗರ ರಸ್ತೆಯಲ್ಲಿ ಹೊಂಡಮಯ; ಆತಂಕದಲ್ಲಿ ವಾಹನ ಸವಾರರು..!!

ಉಡುಪಿ, ಜು.31: ರಸ್ತೆಯಲ್ಲಿ ಹೋಂಡ ಆಗುತ್ತೆ ಅಂತ ಮರ ಕಡಿದರು. ಕಡಿದ ಮರ ಕಾಣೆಯಾಗಿದೆ ರಸ್ತೆಯಲ್ಲಿ ಹೊಂಡ ಹಾಗೆಯೇ ಇದೆ.


ಹೌದು.. ರಾಜ್ಯ ಹೆದ್ದಾರಿಯಲ್ಲಿ ಮರದ ನೀರು ಬಿದ್ದು ರಸ್ತೆಯಲ್ಲಿ ಹೊಂಡ ಆಗಿದೆ ಎಂಬ ಕಾರಣದಿಂದ ದೊಡ್ಡ ದೊಡ್ಡ ಎರಡು ಆಲದ ಮರವನ್ನು ಕಡಿಯಲಾಯಿತು. ಕಡಿದ ಆಲದ ಮರ ಸ್ಥಳದಲ್ಲಿ ಕಾಣೆಯಾಗಿದೆ ಆದರೆ ಸ್ಥಳದಲ್ಲಿದ್ದ ಹೊಂಡ ಹಾಗೆ ಇದ್ದು ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿದೆ.

ರಸ್ತೆಯಲ್ಲಿ ಬ್ಯಾರಿಕೆಟ್ ಇಟ್ಟು ಮತ್ತೊಂದು ಅಪಘಾತಕ್ಕೆ ಕಾರಣವಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಇತ್ತ ಗಮನ ಹರಿಸಿ ಹೊಂಡ ಮುಚ್ಚುವ ಜೊತೆಗೆ ರಸ್ತೆಯಲ್ಲಿಟ್ಟ ಬ್ಯಾರಿಕೇಟ್ ತೆರವು ಮಾಡಬೇಕಾಗಿದೆ. ಸಾರ್ವಜನಿಕ ವಲಯದಲ್ಲಿ ಮಾತು ಕೇಳು ಬರುತ್ತಿದೆ.

You cannot copy content from Baravanige News

Scroll to Top