ಉಡುಪಿ, ಆ.2: ದ್ವಿಚಕ್ರ ವಾಹನದಲ್ಲಿ ಯುವಕನೋರ್ವ ಹುಚ್ಚಾಟವಾಡಿದ ಘಟನೆ ಮಣಿಪಾಲದದ ಡಿಸಿ ಆಫೀಸ್ ರಸ್ತೆಯಲ್ಲಿ ನಡೆದಿದೆ.
ಯುವಕನೋರ್ವ ಮಣಿಪಾಲದ ಡಿಸಿ ಆಫೀಸ್ ರಸ್ತೆಯಲ್ಲಿ ರೀಲ್ಸ್ ಮಾಡಲು ಹೋಗಿ ಸ್ಕೂಟಿಯನ್ನು ಯದ್ವಾತದ್ವವಾಗಿ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿದ್ದಾನೆ.
ಉಡುಪಿ ರಿಜಿಸ್ಟ್ರೇಷನ್ ಹೊಂದಿರುವ ಸ್ಕೂಟಿ ಇದಾಗಿದ್ದು, ಆತ ಅಪಾಯಕಾರಿಯಾಗಿ ಸ್ಕೂಟಿ ಓಡಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಯುವಕನ ಹುಚ್ಚಾಟದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.