ನಾಡಿನ ಪ್ರಸಿದ್ಧ ಚಲನಚಿತ್ರ ನಟರಾದ ಅರ್ಜುನ್ ಸರ್ಜಾ ಅವರು ಸಕುಟುಂಬಿಕರಾಗಿ ತಮ್ಮ 60ನೇ ಜನ್ಮನಕ್ಷತ್ರದ ಸಮಾರಂಭಕ್ಕೆ ಶ್ರೀಪಲಿಮಾರು ಮಠಾಧೀಶರಾದ ಶ್ರೀಶ್ರೀವಿದ್ಯಾಧೀಶ ತೀರ್ಥ ಶ್ರೀಪಾದಾರನ್ನು ಚೆನ್ನೈನ ತಮ್ಮ ಶ್ರೀಯೋಗಾಂಜನೇಯ ದೇವಸ್ಥಾನಕ್ಕೆ ವಾದ್ಯಘೋಷದೊಂದಿಗೆ ಪೂರ್ಣಕುಂಭ ಸ್ವಾಗತ ಮಾಡಿ, ಶ್ರೀಗಳಿಗೆ ತಮ್ಮ ದೇವಸ್ಥಾನವನ್ನು ತೋರಿಸಿ, ಪಾದಪೂಜಾದಿಗಳನ್ನು ನೆರೆವೇರಿಸಿದರು.
ಈ ಸಂದರ್ಭದಲ್ಲಿ ಶ್ರೀಮಠದ ಆಪ್ತಕಾರ್ಯದರ್ಶಿಗಳಾದ ಕೆ.ಗಿರೀಶ ಉಪಾಧ್ಯಾಯ, ಶ್ರೀಮಠದ P. R. O. ಆದ ಕಡೆಕಾರು ಶ್ರೀಶ ಭಟ್ ಮತ್ತು ದೇವಳದ ಪ್ರಧಾನ ಪುರೋಹಿತರಾದ ಶ್ರೀಪತಿ ಭಟ್ ಉಪಸ್ಥಿತರಿದ್ದರು.