ಮಣಿಪಾಲ, ಆ.3: ಅಪಾಯಕಾರಿ ರೀತಿಯಲ್ಲಿ ದ್ವಿಚಕ್ರ ವಾಹನವನ್ನು ಚಲಾಯಿಸಿ ರಸ್ತೆಯಲ್ಲಿ ಸಂಚರಿಸುವವರಿಗೆ ಅಪಾಯ ತಂದೊಡ್ಡಿದ್ದ ಮತ್ತು ರೀಲ್ಸ್ ಮಾಡಿದ್ದ 19 ವರ್ಷದ ಯುವಕನನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಬುಧವಾರ ಆಗಸ್ಟ್ 02 ರಂದು ಇಬ್ಬರು ಯುವಕರು ಸ್ಕೂಟರ್‌ಗಳನ್ನು ಅಪಾಯಕಾರಿಯಾಗಿ ಅತಿವೇಗದಲ್ಲಿ ಚಲಾಯಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ದ್ವಿಚಕ್ರ ವಾಹನಗಳು ಅಪಾಯಕಾರಿಯಾಗಿ ಸಂಚರಿಸುತ್ತಿರುವ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದರು.
ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಮಣಿಪಾಲ ಪೊಲೀಸರು ಸಿಸಿಟಿವಿ ದ್ರಶ್ಯಗಳ ಆಧಾರದಲ್ಲಿ ವಾಹನದ ಮಾಲೀಕ ಪರ್ಕಳ ನಿವಾಸಿ ಆಶಿಕ್ (19) ಎಂಬಾತನನ್ನು ಗುರುತಿಸಿ ಬಂಧಿಸಿದ್ದು, ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವಕರು ಕೆಲವೇ ಅಂತರದಲ್ಲಿ ತಮ್ಮ ಎದುರು ಸಂಚರಿಸುತ್ತಿದ್ದ ಕಾರಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿ ಸಿದ್ದು ವಿಡಿಯೋ ದಲ್ಲಿ ಸೆರೆಯಾಗಿತ್ತು . ಮಣಿಪಾಲದಲ್ಲಿರುವ ಡಿಸಿ ಕಚೇರಿಗೆ ಹೋಗುವ ರಸ್ತೆಯಲ್ಲಿ ಈ ವಿಡಿಯೋ ಮಾಡಲಾಗಿದೆ. ವಾಹನಗಳು ಉಡುಪಿ ನೋಂದಣಿಯವು.