ಉಡುಪಿ: ಆಗಸ್ಟ್ 03 ಮತ್ತು 04 ಜಿಲ್ಲೆಯ ಹಲವೆಡೆ ಗಂಟೆಗೆ 30-40 ಕಿಮೀ ವೇಗದ ಬಿರುಗಾಳಿ ಬೀಸುವ ಸಾಧ್ಯತೆ; ಹವಾಮಾನ ಇಲಾಖೆ ಮುನ್ಸೂಚನೆ

ಉಡುಪಿ, ಆ.3: ಆಗಸ್ಟ್ 3 ಮತ್ತು 4ನೇ ತಾರೀಖಿನಂದು ಉಡುಪಿ ಜಿಲ್ಲೆಯ ಹಲವು ಸ್ಥಳಗಳಲ್ಲಿ ಗಂಟೆಗೆ 30-40 ಕಿಮೀ ವೇಗದ ಬಿರುಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಮುನ್ಸೂಚನೆ ನೀಡಿದೆ.

ಹಾಗಾಗಿ, ಸಾರ್ವಜನಿಕರು ಸಮುದ್ರ, ನದಿ ತೀರ ಪ್ರದೇಶ, ಹಳ್ಳ, ಕೊಳ್ಳಗಳಲ್ಲಿ ಇಳಿಯುವುದನ್ನು ನಿಷೇಧಿಸಿದೆ ಮತ್ತು ಅಪಾಯಕಾರಿ ಕಟ್ಟಡ, ಮರ, ಕಂಬಗಳ ಕೆಳಗೆ/ಹತ್ತಿರದಲ್ಲಿ ನಿಲ್ಲಬಾರದು, ಇಂತಹ ಸಂದರ್ಭದಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಉಡುಪಿ ಜಿಲ್ಲಾಧಿಕಾರಿಯವರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

You cannot copy content from Baravanige News

Scroll to Top