ದೆಹಲಿಯ ಕೆಂಪು ಕೋಟೆ, ರಾಜ್‍ಘಾಟ್‍ನಲ್ಲಿ ಸೆಕ್ಷನ್ 144 ಜಾರಿ; ಪೊಲೀಸರಿಂದ ಕಟ್ಟೆಚ್ಚರ..!!

ನವದೆಹಲಿ, ಆ 10: ಆಗಸ್ಟ್ 15 ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತಿರುವ ಹಿನ್ನಲೆಯಲ್ಲಿ ಕೆಂಪು ಕೋಟೆ, ರಾಜ್‍ಘಾಟ್ ಹಾಗೂ ಐಟಿಒನಲ್ಲಿ ದೆಹಲಿ ಪೊಲೀಸರು ಸೆಕ್ಷನ್ 144 ಜಾರಿ ಮಾಡಿದ್ದಾರೆ.

ಈ ವರ್ಷ ಕೂಡ ಸ್ವಾತಂತ್ರ್ಯ ದಿನದ ಹಿನ್ನೆಲೆಯಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದ್ದು, ದೇಶಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸುತ್ತಿದ್ದಾರೆ.

ಇನ್ನು ಕೆಂಪು ಕೋಟೆ ಹಾಗೂ ರಾಜ್‍ಘಾಟ್ ಪ್ರದೇಶಗಳಲ್ಲಿ ಯಾವುದೇ ರೀತಿಯ ಸಭೆ, ಸಮಾರಂಭಗಳನ್ನು ಮಾಡಲು ಅನುಮತಿ ನೀಡಲ್ಲ ಎಂದು ಉಪ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

You cannot copy content from Baravanige News

Scroll to Top