ಏರ್ಲೈನ್ ‘ಏರ್ ಇಂಡಿಯಾ’ ಹೊಸ ಲೋಗೋದೊಂದಿಗೆ ಕಂಗೊಳಿಸುತ್ತಿದೆ. ಕಡುಗೆಂಪು ಬಣ್ಣದಲ್ಲಿ ಏರ್ ಇಂಡಿಯಾದ ಲೋಗೋ, ಡಿಸೈನ್ ಬದಲಾವಣೆ ಮಾಡಿಕೊಂಡಿದೆ.
2023, ಡಿಸೆಂಬರ್ನಿಂದ ಹೊಸ ಲುಕ್ನಲ್ಲಿ ಏರ್ ಇಂಡಿಯಾ ಹಾರಾಟ ನಡೆಸಲಿದೆ. ಕೇಂದ್ರ ಸರ್ಕಾರದಿಂದ ಟಾಟಾ ಕಂಪನಿಯು ಏರ್ ಇಂಡಿಯಾ ಖರೀದಿಸಿತ್ತು. ಇದೀಗ ಟಾಟಾ ಕಂಪನಿಯು ಲೋಗೋ ಹಾಗೂ ಲುಕ್ ಬದಲಾವಣೆ ಮಾಡಿಕೊಂಡಿದೆ.
ನೂತನ ಲೋಗೋಕ್ಕೆ ಮಹಾರಾಜ ಮ್ಯಾಸ್ಕಾಟ್ ಟಚ್ ಕೊಡಲಾಗಿದೆ. ತುಂಬಾನೇ ಸ್ಟೈಲೀಶ್ ಆಗಿ ಡಿಸೈನ್ ಮಾಡಿರುವ ಲೋಗವು ಕೆಂಪು, ಬಿಳಿ ಮತ್ತು ಪರ್ಪಲ್ ಕಲರ್ನಿಂದ ಕಂಗೊಳಿಸುತ್ತಿದೆ. ಇದು ‘ಮಿತಿಯಿಲ್ಲದ ಸಾಧ್ಯತೆ’ಗಳನ್ನು ಸೂಚಿಸುತ್ತದೆ ಎಂದು ಟಾಟಾ ಸನ್ಸ್ ಅಧ್ಯಕ್ಷ ಎನ್.ಚಂದ್ರಶೇಖರನ್ ತಿಳಿಸಿದ್ದಾರೆ.