ಸೊರಕೆ ಮಾತು ಕೇಳ್ತೀರಾ..? ಅವರು ಯಾರು..? ಕೋಳಿ‌ ಅಂಕಕ್ಕೆ ದಾಳಿ ನಡೆಸಿದ ಪೊಲೀಸರಿಗೆ ಗುಂಪಿನಿಂದ ಅವಾಜ್..!!

ಮಣಿಪಾಲ‌: ಮಣಿಪಾಲ ಬಳಿಯ 80 ಬಡಗುಬೆಟ್ಟುವಿನಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರಿಗೇ ಗುಂಪೊಂದು ಅವಾಜ್ ಹಾಕಿದ ಘಟನೆ ನಡೆದಿದೆ.

ಈ ಗುಂಪು ಬೆದರಿಸುವ ರೀತಿಯಲ್ಲಿ ಪೊಲೀಸರಿಗೆ ಆವಾಜ್ ಹಾಕುತ್ತಿದ್ದರೂ ಪೊಲೀಸರು ಮಾತ್ರ ಅಸಹಾಯಕರಾಗಿ ನಿಂತಿದ್ದಾರೆ.

ಕೋಳಿ ಅಂಕ ನಡೆಸುತ್ತಿದ್ದ ತಂಡವು ,” ನೀವು ಇಲ್ಲಿಗೆಲ್ಲ ಬರುತ್ತೀರಿ. ಆದರೆ ಪಬ್ , ಬಾರ್ ಓಸಿ, ಮಟ್ಕಾ ನಡೆಯುತ್ತಿದ್ದರೂ ಸುಮ್ಮನಿರುತ್ತೀರಿ ಯಾಕೆ..? ಯಾಕೆಂದರೆ ನಿಮಗೆ ಅಲ್ಲಿ ಮಾಮೂಲಿ ಸಿಗುತ್ತೆ. ಮಾಜಿ‌ ಸಚಿವ ಸೊರಕೆ ಮಾತು ಕೇಳ್ತೀರಾ..? ಅವರು ಯಾರು..? ನಮ್ಮಲ್ಲೂ ಐದು ಜನ ಶಾಸಕರಿದ್ದಾರೆ. ಮಣಿಪಾಲದಲ್ಲಿ ಪಬ್ , ಬಾರ್ ಗಳು ಮದ್ಯ ರಾತ್ರಿ ವರೆಗೆ ನಡೆಯುತ್ತವೆ” ಎಂದು ಗುಂಪು ಪೊಲೀಸರಿಗೇ ಆವಾಜ್ ಹಾಕಿದೆ.

ಅವಾಜ್ ಹಾಕಿದ ಗುಂಪಿನಲ್ಲಿ ಪಂಚಾಯತ್ ಸದಸ್ಯನೂ ಇದ್ದ ಎನ್ನಲಾಗಿದೆ. ಆದರೆ ಈ ತನಕ ಪೊಲೀಸರು ಇವರ ವಿರುದ್ಧ ಕ್ರಮ ಕೈಗೊಂಡ ಬಗ್ಗೆ ವರದಿಯಾಗಿಲ್ಲ.

You cannot copy content from Baravanige News

Scroll to Top