ಬಂಟಕಲ್ಲು, ಆ.15: ರಿಕ್ಷಾ ಚಾಲಕರ ಹಾಗೂ ಮಾಲಕರ ಸಂಘ ರಿ. ಬಂಟಕಲ್ ಇದರ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯು ಇಂದು ನಡೆಯಿತು.
ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷರು ರತನ್ ಕುಮಾರ್ ಶೆಟ್ಟಿ ಧ್ವಜಾರೋಹಣ ನೆರವೇರಿಸಿದರು.
ರಿಕ್ಷಾ ಚಾಲಕರ ಹಾಗೂ ಮಾಲಕರ ಸಂಘ ರಿ ಬಂಟಕಲ್ ಇದರ ಗೌರವ ಅಧ್ಯಕ್ಷರಾದ ಮಾಧವ ಕಾಮತ್, ಕೆ.ಆರ್ ಪಾತ್ಕರ್ ಅಧ್ಯಕ್ಷರು ನಾಗರಿಕ ಸೇವಾ ಸಮಿತಿ ರಿ. ಬಂಟಕಲ್, ಉಮೇಶ್ ರಾವ್ ಅಧ್ಯಕ್ಷರು ಕಾರು ಚಾಲಕರ ಹಾಗೂ ಮಾಲಕರ ಸಂಘ ಬಂಟಕಲ್, ಮಂಜುನಾಥ್ ಪೂಜಾರಿ ಅಧ್ಯಕ್ಷರು ಆಟೋರಿಕ್ಷಾ ಚಾಲಕರ ಹಾಗೂ ಮಾಲಕರ ಸಂಘ ರಿ. ಬಂಟಕಲ್ ಇವರು ಉಪಸ್ಥಿತರಿದ್ದರು.
ಪುಂಡಲೀಕ ಮರಾಠೆ ನಿವೃತ್ತ ಶಿಕ್ಷಕರು ಗೋಪಾಲ್ ದೇವಾಡಿಗ ಸ್ವಾಗತಿಸಿದರು. ಡೆನಿಸ್ ಡಿಸೋಜಾ ವಂದಿಸಿದರು.