ತಿರುವನಂತಪುರಂ: ತಾಯಿಯ ಎದೆ ಹಾಲು ಕುಡಿದು ಮಲಗಿದ್ದ ಮಗು ಸಾವನ್ನಪ್ಪಿರುವ ಘಟನೆ ತಿರುವನಂತಪುರದಲ್ಲಿ ನಡೆದಿದೆ.
ರಾಜಧಾನಿಯ ಪಳ್ಳಿಚಲ್ ಮೂಲದ ಜಯಕೃಷ್ಣನ್ ಮತ್ತು ಜಾನಿಮೋಲ್ ದಂಪತಿಯ ಮಗ ಜಿತೇಶ್ ಮೃತಪಟ್ಟ ಮಗು.
ಭಾನುವಾರದಂದು ತಾಯಿಯು ಮಗುವಿಗೆ ಹಾಲುಣಿಸಿ ಮಲಗಿಸಿದ್ದರು.
ಬೆಳಿಗ್ಗಿನ ಜಾವ ತಾಯಿಯು ಮಗುವನ್ನು ಎಬ್ಬಿಸಲು ಎಂದು ಹೋದಾಗ ಮಗು ಏಳಲೇ ಇಲ್ಲ.
ಹಾಗಾಗಿ ಪೊಷಕರು ಕೂಡಲೇ ಮಗುವನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು.
ನಾಡಿಮಿಡಿತ ಕಡಿಮೆಯಾದ ಕಾರಣ, ಮಗುವನ್ನು ಎಸ್‌ಐಟಿ ಆಸ್ಪತ್ರೆಗೆ ಸ್ಥಳಾಂತರಿಸಿದರು.
ಮಗುವಿಗೆ ಚಿಕಿತ್ಸೆ ನೀಡಿದರೂ ಸೋಮವಾರ ಸಂಜೆ ಮಗು ಸಾವನ್ನಪ್ಪಿರುವುದು ಧೃಡಪಟ್ಟಿದೆ.
ತಾಯಿ ಹಾಲು ಕುಡಿಸುವ ವೇಳೆ ಹಾಲು ಮಗುವಿನ ಶ್ವಾಸಕೋಶಕ್ಕೆ ಹೋದ ಪರಿಣಾಮ ಮಗು ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದರು.
ಅಲ್ಲದೆ ಎದೆಹಾಲು ಮಗುವಿನ ಶ್ವಾಸನಾಳದಲ್ಲಿ ಸಿಲುಕಿಕೊಂಡು ಉಸಿರಾಡಲು ಕಷ್ಟವಾಗಿ ಮಗು ಮೃತಪಟ್ಟಿರುವುದಾಗಿ ವಿವರಿಸಿದ್ದಾರೆ