ಪಡಿತರ ಚೀಟಿ ತಿದ್ದುಪಡಿ; ಅರ್ಜಿ ಸಲ್ಲಿಲು ಕೊನೆಯ ದಿನ ವಿಸ್ತರಣೆ

ಬೆಂಗಳೂರು, ಆ 22: ಪಡಿತರ ಚೀಟಿ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ನೀಡಿದ್ದ ಕಾಲಾವಕಾಶದಲ್ಲಿ ಮತ್ತೆ ಬದಲಾವಣೆ ಮಾಡಲಾಗಿದೆ. ಸೆಪ್ಟೆಂಬರ್ 1ರಿಂದ 10ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಈ ಹಿಂದೆ ಅರ್ಜಿ ಸಲ್ಲಿಕೆಗೆ ಆಗಸ್ಟ್ 21ರಂದು ಕೊನೆಯ ದಿನಾಂಕವನ್ನು ನೀಡಲಾಗಿತ್ತು. ಆದರೆ ಹಲವೆಡೆ ಸರ್ವಸ್ ಸಮಸ್ಯೆಯ ಕಾರಣದಿಂದ ತುಂಬಾ ಜನರು ತಿದ್ದುಪಡಿ ಅರ್ಜಿ ಸಲ್ಲಿಕೆ ಮಾಡಲಾಗದೆ ಮನೆಗೆ ತೆರಳಿದ್ದರು.

ಇದೀಗ ಪಡಿತರ ಚೀಟಿ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಸೆಪ್ಟಂಬರ್‌ 01 ರಿಂದ 10 ರವರೆಗೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆ ತನಕ ಅವಕಾಶ ಕಲ್ಪಿಸಲಾಗಿದೆ.

You cannot copy content from Baravanige News

Scroll to Top